ವೀರಾಜಪೇಟೆ, ಸೆ. 16: 2019ರ ಕರ್ನಾಟಕ ಪ್ರೌಢ ಶಿಕ್ಷಣ ಭರತನಾಟ್ಯ ಪರೀಕ್ಷೆಯಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚ್ಯೆತನ್ಯ ಪ್ರಥಮ ಸ್ಥಾನದಲ್ಲಿ ತೇರ್ಗಡೆಗೊಂಡಿದ್ದಾಳೆ. ವಿವಿಧೆಡೆಯಲ್ಲಿ ರಾಜ್ಯ ಮಟ್ಟದ ಭರತ ನಾಟ್ಯ ಸ್ಪರ್ಧೆಯಲ್ಲಿ 2 ಚಿನ್ನ, 1 ಬೆಳ್ಳಿ, ಪಡೆದುಕೊಂಡಿದ್ದಾಳೆ. ಇತ್ತೀಚೆಗೆ ಬೆಂಗಳೂರಿನ ಚಿಗುರು ಕಲ್ಚರಲ್ ಟ್ರಸ್ಟ್‍ನಿಂದ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಯುವ ಚೇತನ ಪ್ರಶಸ್ತಿಗೆ ಭಾಜನರಾಗಿದ್ದಾಳೆ. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ನೆಹರು ನಗರದ ಸುನೀತಾ ಹಾಗೂ ದಿನೇಶ್ ಪುತ್ರಿಯಾಗಿರುವ ಈಕೆ ನೃತ್ಯ ಗುರು ಪ್ರೇಮಾಂಜಲಿ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ.