ವೀರಾಜಪೇಟೆ, ಸೆ. 16: ಉತ್ತರ ಪ್ರದೇಶದ ಕಾನ್ಪುರದಲ್ಲಿ ತಾ. 22ರಿಂದ 27ರವರೆಗೆ ಫ್ಯೆವ್ ಎ ಸ್ಯೆಡ್ ಪುರುಷರ 4ನೇ ರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ಪಂದ್ಯಾಟದ ತೀರ್ಪುಗಾರರಾಗಿ ಅಂತರ್ರಾಷ್ಟ್ರಿಯ ಹಾಕಿ ತೀರ್ಪುಗಾರ ಕೊಂಡಿರ ಕೀರ್ತಿ ಮುತ್ತಪ್ಪ ಆಯ್ಕೆಯಾಗಿದ್ದಾರೆ. ಈ ಪಂದ್ಯಾಟದಲ್ಲಿ ಭಾರತದ ಬಲಿಷ್ಠ ತಂಡಗಳಾದ ಕರ್ನಾಟಕ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಜಾರ್ಖಂಡ್, ಒಡಿಸಾ, ತಮಿಳುನಾಡು, ಉತ್ತರ ಪ್ರದೇಶ ತಂಡಗಳು ಭಾಗವಹಿಸಲಿವೆ. ಕಳೆದ ಬಾರಿ ಬೆಂಗಳೂರಿನ ಅಕ್ಕಿತಿಮ್ಮನ ಹಳ್ಳಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ಕರ್ನಾಟಕ ತಂಡ ಚಾಂಪಿಯನ್‍ಶಿಪ್ ಪಡೆದುಕೊಂಡಿತ್ತು.