ಗೋಣಿಕೊಪ್ಪ ವರದಿ, ಸೆ. 15 : ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಪುಚ್ಚಿಮಾಡ ತಿಮ್ಮಯ್ಯ, ಪುಚ್ಚಿಮಾಡ ಚೋಂದಮ್ಮ ಮತ್ತು ಮೀನಾ ಸುಬ್ಬಯ್ಯ ಜ್ಞಾಪಕಾರ್ಥದ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜು ಪ್ರಥಮ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ದ್ವಿತೀಯ ಸ್ಥಾನದೊಂದಿಗೆ ಪಡೆದುಕೊಂಡಿತು.

ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿಗಳಾದ ಸಣ್ಣುವಂಡ ಎಂ. ಪೊನ್ನಮ್ಮ , ಡಿ. ಟಿ. ಪೊನ್ನಮ್ಮ ತಂಡ, ದ್ವಿತೀಯ ಸ್ಥಾನದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎಂ. ಕೆ. ಹರ್ಷಿತಾ, ಗೀತಾ ಶಿವರಾಮನ್ ತಂಡ ಮುಡಿಗೇರಿಸಿಕೊಂಡರು. ಕನ್ನಡ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಸಣ್ಣುವಂಡ ಎಂ. ಪೊನ್ನಮ್ಮ ಪ್ರಥಮ, ಕಾಲ್ಸ್ ಶಾಲೆಯ ಆದ್ಯಾ ದ್ವಿತೀಯ, ಇಂಗ್ಲೀಷ್ ವಿಭಾಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎಂ. ಕೆ. ಹರ್ಷಿತಾ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಜಯಸೂರ್ಯ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು. ಇಂಗ್ಲೀಷ್ ವಿಭಾಗದಲ್ಲಿ ಕೌಶಲ್ಯ ತರಬೇತಿಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯ ಹಾಗೂ ಕನ್ನಡ ಭಾಷೆಯಲ್ಲಿ ಭಾರತದ ಆರ್ಥಿಕ ಅವನತಿಯಲ್ಲಿ ಕಪ್ಪು ಹಣದ ಪಾತ್ರ ವಿಷಯದಲ್ಲಿ ಸ್ಪರ್ಧೆ ನಡೆಯಿತು. ಜಿಲ್ಲೆಯ ಸುಮಾರು 29 ತಂಡಗಳು ಪಾಲ್ಗೊಂಡಿದ್ದವು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಸದಸ್ಯರಾದ ಡಾ. ರೇಖಾ ವಸಂತ್, ಕ್ರೀಡಾ ಸಾಧಕ ಜಮ್ಮಡ ಜೋಯಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವಿದ್ಯಾರ್ಥಿ ಕಲಿಯಂಡ ಪೊನ್ನಪ್ಪ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸುವದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು. ದಾನಿ ಪುಚ್ಚಿಮಾಡ ಲಾಲಾ ಪೂಣಚ್ಚ, ಪುಚ್ಚಿಮಾಡ ಶುಭಾಷ್, ಕಾವೇರಿ ಎಜುಕೇóನ್ ಸೊಸೈಟಿ ನಿರ್ದೇಶಕಿ ಪೊನ್ನಮ್ಮ ಮಾಚಯ್ಯ, ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್, ಕಾವೇರಿ ಕಾಲೇಜು ಮತ್ತು ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ತಿರುನೆಲ್ಲಿಮಾಡ ದೇವಯ್ಯ, ಕಾರ್ಯದರ್ಶಿ ವಾಣಿ ಗಣಪತಿ, ಸಂಚಾಲಕಿ ಎಸ್. ಎಂ. ರಜನಿ, ಕಾರ್ಯಕ್ರಮ ಸಂಚಾಲಕಿ ಎಂ. ಡಿ. ರೇಶ್ಮಾ ಬಹುಮಾನ ವಿತರಣೆ ಮಾಡಿದರು. ಪುಚ್ಚಿಮಾಡ ತಿಮ್ಮಯ್ಯ, ಪುಚ್ಚಿಮಾಡ ಚೋಂದಮ್ಮ ಮತ್ತು ಮೀನಾ ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ ಗೌರವ ನೀಡಲಾಯಿತು. ಕಾರ್ಯಕ್ರಮವನ್ನು ತೀರ್ಪುಗಾರರಾದ ಕರ್ತಮಾಡ ಸೋಮಣ್ಣ, ಸಣ್ಣುವಂಡ ಕೆ. ಚೆಂಗಪ್ಪ, ಅನೀಶ್ ಮಾದಪ್ಪ ಉದ್ಘಾಟಿಸಿದರು.