ಮಡಿಕೇರಿ, ಸೆ. 15: ಸಾರ್ವಜನಿಕರು ಕಲಿಕಾ/ ಚಾಲನಾ ಅನುಜ್ಞಾ ಪತ್ರವನ್ನು ಪಡೆಯುವಾಗ, ಇಲಾಖಾ ವೆಬ್‍ಸೈಟ್ hಣಣಠಿs://ಠಿಚಿಡಿivಚಿhಚಿhಚಿಟಿ. gov.iಟಿ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಪಡೆದು, ಸದರಿ ಅರ್ಜಿಯೊಂದಿಗೆ ವಿಳಾಸ ಪುರಾವೆ, ವಯಸ್ಸಿನ ಪುರಾವೆಯುಳ್ಳ ಸೂಕ್ತ ದಾಖಲಾತಿಗಳೊಂದಿಗೆ ಕಚೇರಿಗೆ ಹಾಜರಾಗಿ, ಕಲಿಕಾ/ ಚಾಲನಾ ಅನುಜ್ಞಾ ಪತ್ರವನ್ನು ಪಡೆದುಕೊಳ್ಳಬಹುದು ಎಂದು ತಿಳಿಯಪಡಿಸಿದೆ.

ಮೋಟಾರು ವಾಹನ ಕಾಯ್ದೆ 2019 ಜಾರಿಯಾಗಿರುವದರಿಂದ, ವಾಹನ ಮಾಲೀಕರು ತಮ್ಮ ವಾಹನಗಳ ದಾಖಲಾತಿಗಳನ್ನು ಊರ್ಜಿತದಲ್ಲಿ ಇಟ್ಟುಕೊಳ್ಳಲು ತಿಳಿಸಿದೆ ಹಾಗೂ ವಾಹನ ತಪಾಸಣೆ ಸಂದರ್ಭದಲ್ಲಿ ದಾಖಲಾತಿಗಳನ್ನು ಚಾಲಕರು ಹಾಜರುಪಡಿಸಿ, ಉಂಟಾಗಬಹುದಾದ ಅನಾನುಕೂಲತೆಯಿಂದ ತಪ್ಪಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.