ವೀರಾಜಪೇಟೆ, ಸೆ. 15: ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆ, ಏರಿದ ದುಡಿಮೆ ವೆಚ್ಚ, ಕೈಗೆಟುಕದ ಬೆಲೆÀ, ಪೋತ್ಸಾಹ ಧನದ ಕೊರತೆ, ವನ್ಯಪಾಣಿಗಳ ಉಪಟಳದಿಂದ ಭತ್ತ ಕೃಷಿಯಿಂದ ರೈತ ದೂರವಾಗುತಿರುವಂತೆ ಕಾಣುತ್ತಿದೆ. ಹಿಂದೊಮ್ಮೆ ನಾಟಿ ಕಾರ್ಯದಲ್ಲಿ ಪÀರಸ್ಪÀರ ಕೈಜೋಡಿಸುತ್ತಿದ್ದ (ಮುಯ್ಯಿಯಾಳು) ಅಕ್ಕಪಕ್ಕದವರು ಇಂದು ವಯಸ್ಸಾಗುತ್ತಿದ್ದು, ತಮ್ಮ ಕೆಲಸ ಕಾರ್ಯದಲ್ಲಿ ತಮ್ಮನ್ನು ತಾವೇ ತೋಡಗಿಸಿಕೊಂಡಿರುವದು ಕಾಣಬಹುದು.
ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ವೀರಾಜಪೇಟೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಚುರುಕಾಗಿದ್ದು, ರೈತರ ಮುಖದಲ್ಲಿ ಮಂದಹಾಸÀ ಬೀರಿದ್ದು, ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ 2019 ಜನವರಿಯಿಂದ ತಾ. 9 ಅಂತ್ಯಕ್ಕೆ 105.69 ಇಂದು ಮಳೆಯಾಗಿದ್ದು, 2018ರÀಲ್ಲಿ 114.48 ಇಂಚು ಮಳೆಯಾಗಿತ್ತು
ಕೃಷಿ ಚಟುವಟಿಕೆ ಚುರುಕುಗೊಂಡು ಸಸಿಮಡಿ ತಯಾರಿಸುವದರೊಂದಿಗೆ ಸಾಂಪ್ರಾದಾಯಕ ಭತ್ತ ತಳಿಗಳಾದ ದೊಡ್ಡಿ, ಬಿಳಿಯ, ಬಿ.ಕೆ.ಬಿ, ಸಣ್ಣ ಜೊತೆಗೆ ಸುಧಾರಿತ ತಳಿಗಳಾದ ಕೆ.ಪಿ.ಆರ್. 1, ಇಂಟಾನ್, ಬಿ.ಆರ್. 2655, ಐ.ಆರ್. 64, ಜಯ, ಐ.ಇ.ಟಿ. 13901 (ತುಂಗಾ), ಬಿ.ಪಿ.ಟಿ., ತನು, ಉಮ ಅಲ್ಲದೆ ಅತೀರಾ ಭತ್ತ ತಳಿಗಳ ಸಸಿಮಡಿ ಹಾಗೂ ನಾಟಿ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ. ನಾಟಿ ಕಾರ್ಯವನ್ನು ಈಗಾಗಲೇ ಕೆಲವು ರೈತರು ಪೂರ್ಣಗೊಳಿಸಿದ್ದು, ಇನ್ನು ಕೆಲವರು ಸಸಿಮಡಿ ಮಾಡಿದವರು ಭಾರೀ ಮಳೆಯ ಕಾರಣದಿಂದ ನಾಟಿ ಮಾಡಲಾಗದೆ ಕೈಚೆಲ್ಲಿ ಕುಳಿತಿರುವ ಪರಿಸ್ಥಿತಿ ಬಂದೊದಗಿದೆ. ತಿಂಗಳ ಹಿಂದೆ, ಮಳೆ ಇಲ್ಲದೆ ಆನಾವೃಷ್ಟಿ ಆದರೆ ಅತಿವೃಷ್ಟಿಯಿಂದ ಸ್ವಂತಃ ಮನೆ ಬಿಟ್ಟು ಪರಿಹಾರ ಕೇಂದ್ರದಲ್ಲಿ ನೆಲೆಸುವ ಆನಿವಾರ್ಯತೆ ಎದುರಾಗಿತ್ತು.
2019-20ನೇ ಸಾಲಿಗೆÀ ವೀರಾಜಪೇಟೆ ತಾಲೂಕಿನ ಆರು ಹೋಬಳಿಯ ಒಟ್ಟು 16000 ಹೆಕ್ಟೆರ್‍ನಲ್ಲಿ, ವೀರಾಜಪೇಟೆ-3750 ಹೆಕ್ಟೇರ್, ಪೊನ್ನಂಪೇಟೆ-3450 ಹೆಕ್ಟೇರ್, ಅಮ್ಮತ್ತಿ-2500 ಹೆಕ್ಟೇರ್, ಹುದಿಕೇರಿ-2200 ಹೆಕ್ಟೇರ್, ಶ್ರೀಮಂಗಲ-2300 ಹೆಕ್ಟೇರ್, ಬಾಳಲೆ-1800 ಹೆಕ್ಟೇರ್ ಮುಂಗಾರು ಹಂಗಾಮಿಗೆ ಭತ್ತ ಬೆಳೆಯುವ ಕ್ಷೇತ್ರಗಳು ನಿಗದಿ ಪಡಿಸಿದ ಬೆಳೆ ಕ್ಷೇತ್ರ 14000 ಹೆಕ್ಟೆರ್ ಆಗಿದೆ. ನಾಟಿಯಾದ ಒಟ್ಟು ಕ್ಷೇತ್ರ 8182 ಹೆಕ್ಟೆರ್ ಅಂದರೆ ಶೇ. 58.44 ಮಾತ್ರವಾಗಿದೆ.
ಆರಂಭದಲ್ಲಿ ಮುಂಗಾರು ವಿಳಂಬದಿಂದ ಭತ್ತ ಕೃಷಿಯಲ್ಲಿ ಹಿನ್ನೆಡೆಯಾದ್ದರು, ನಾಟಿ ಕಾರ್ಯ ಮಾಡಿ ನಿಟ್ಟುಸಿರು ಬಿಟ್ಟ ರೈತನಿಗೆ ನಂತರ ಸುರಿದ ಭಾರೀ ಮಳೆಯಿಂದ ದಿಕ್ಕೆ ತೋಚದಂತಾಗಿದೆ. ಆದಾಗಿಯೂ ಕೆಲವು ರೈತರು ಮೇವಿಗಾಗಿ ನೇರ ಬಿತ್ತನೆ ಮಾಡಿ ಗದ್ದೆಯನ್ನು ಹಡ್ಲು ಬಿಡದೆ ಸ್ವಾಭಿಮಾನ ಮೆರೆದಿದ್ದಾರೆ.
ಬಿತ್ತನೆ ಬೀಜ: ಮೈಸೂರಿನ ಕೆ.ಎಸ್.ಎಸ್.ಸಿ, ಎನ್.ಎಸ್.ಸಿ. ಹಾಗೂ ವಿ.ಎನ್.ಆರ್. ಸೀಡ್ಸ್ ಬಿತ್ತನೆ ಬೀಜ ಸರಬರಾಜು ಮಾಡಿದ್ದು ಒಟ್ಟು ದಾಸ್ತಾನು-1436.50 ಕ್ಟಿಂಟಾಲ್. ಸಾಮಾನ್ಯ ವರ್ಗ-1222.47, ಪ.ಜಾ-8.50, ಪ.ಪಂ-5.25 ಕ್ಟಿಂಟಾಲ್ ಬಿತ್ತನೆ ಬೀಜ ಖರೀದಿಸಿರುತ್ತಾರೆ. ಬಿತ್ತನೆ ಬೀಜ ಉಳಿಕೆ 290.28 ಕ್ಟಿಂಟಾಲ್.
ಸಾಮಾನ್ಯ ವರ್ಗಕೆ ರೂ. 8 ಹಾಗೂ ಪ.ಜಾ, ಪ.ಪಂ.ದವರಿಗೆ ರೂ. 12ರಂತೆ ಬಿತ್ತನೆ ಬೀಜ ಖರೀದಿಗೆ ಪ್ರೋತ್ಸಾಹ ನೀಡಿದ್ದರೂ, ಪ.ಜಾ, ಪ.ಪಂ. ವರ್ಗ ಪೊನ್ನಂಪೇಟೆ ಹೋಬಳಿಯಲ್ಲಿ 7.50 ಕ್ಟಿಂಟಾಲ್ ಹಾಗೂ ಬಾಳೆಲೆ ಹೋಬಳಿಯಲ್ಲಿ 6.25 ಕ್ಟಿಂಟಾಲ್ ಬಿತ್ತನೆ ಬೀಜ ಖರೀದಿ ಮಾಡಿರುತಾರೆ ಎಂದು ಕೃಷಿ ಅಧಿಕಾರಿ ಶಿವಮೂರ್ತಿ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ವರ್ಷ ತಾಲೂಕಿನ ರೈತರು ಕೃಷಿ ಇಲಾಖೆಯಿಂದ 1436.50 ಕ್ಟಿಂಟಾಲ್ ಬಿತ್ತನೆ ಬೀಜ ಖರೀದಿಸಿದ್ದು 14000 ಹೆಕ್ಟೇರ್ ಭತ್ತ ಕೃಷಿ ನಿಗದಿಪಡಿಸಲಾಗಿದ್ದರೂ, ನಾಟಿ ಆಗಿರುವದು 8182 ಹೆಕ್ಟೇರ್ ಮಾತ್ರ. ರೈತರು ಕೈ ನಾಟಿ, ಡಿ.ಎಸ್.ಆರ್. ಪದ್ಧತಿ ಅಲ್ಲದೆ ಈ ವರ್ಷ ಮಳೆಯಿಂದ ಮೇವಿಗಾಗಿ ನೇರ ಬಿತ್ತನೆಯಿಂದ ನಾಟಿ ಮಾಡಿರುವದು ಕಂಡುಬರುತ್ತದೆ. ವರ್ಷದಿಂದ ವರ್ಷಕ್ಕೆ ವನ್ಯಪ್ರಾಣಿಗಳಿಂದ ನಷ್ಟ, ಕೂಲಿ ಕಾರ್ಮಿಕರ ತೊಂದರೆ ಹಾಗೂ ಭತ್ತಕ್ಕೆ ಪ್ರೋತ್ಸಾಹ ಬೆಲೆ ಇಲ್ಲದಿರುವದು ಅಲ್ಲದೆ ಭೂಪರಿವರ್ತನೆಯಿಂದ ಕೃಷಿ ಭೂಮಿಯ ಮಾರಾಟದಿಂದ ಕೃಷಿ ಮಾಡದೆ ಇರುವದಕ್ಕೆ ಕಾರಣವಾಗಿದೆ.
ಹತ್ತು ವರ್ಷಗಳ ದಾಖಲೆ ಆದರಿಸಿ 14000 ಹೆಕ್ಟೇರ್ ಗುರಿ ಇಡಲಾಗಿತ್ತು. ಈ ವರ್ಷ ತಡವಾದ ಮುಂಗಾರಿನಿಂದ ದಿರ್ಘಾವಧಿಯ ತಳಿಗಳಾದ ತುಂಗ, ಇಂಟಾನ್, ದೊಡ್ಡಿಯ ಜೋತೆಗೆ ಅಲ್ಪಾವಧಿಯ ತಳಿಗಳನ್ನು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಅದರೆ ಸಸಿಮಡಿಗಳಿಗೆ ನೀರು ನುಗ್ಗಿ ಸಸಿಮಡಿಗಳು ನಾಶವಾಗಿದೆ. ನಾಟಿ ಮಾಡಿದ ಗದ್ದೆಗಳಲ್ಲಿ ಪ್ರವಾಹ ಹಾಗೂ ಮರಳು ನಿಂತು ಸುಮಾರು ನಷ್ಟ ಆಗಿದ್ದು ನಿಗದಿಪಡಿಸಿದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲಿ.
ವರದಿ: ಅಮ್ಮಣಿಚಂಡ
ಪ್ರವೀಣ್ ಚಂಗಪ್ಪ