ಮಡಿಕೇರಿ, ಸೆ. 15: ಕೊಡವ ಮಕ್ಕಡ ಕೂಟ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಸಹಯೋಗದಲ್ಲಿ ಸೆ. 20 ರಂದು ಮಧ್ಯಾಹ್ನ 2 ಗಂಟೆಗೆ ಪತ್ರಿಕಾ ಭವನದಲ್ಲಿ ಆರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಹಾಗೂ ಹಿರಿಯ ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ, ಹಿರಿಯ ಸಾಹಿತಿ ಹಾಗೂ ಬರಹಗಾರರಾದ ಬಾಚರಣಿಯಂಡ ಅಪ್ಪಣ್ಣ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಉಳುವಂಗಡ ಕಾವೇರಿ ಉದಯ, ಮುಕೋಂಡ ಪುಷ್ಪ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಬರೆದಿರುವ ಪೊಂಜಂಗ್, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಬರೆದಿರುವ ವಿಧಿರ ಕಳಿಲ್ ಹಾಗೂ ಕರಗಿದ ಬದುಕು (ಕನ್ನಡ), ಉಳುವಂಗಡ ಕಾವೇರಿ ಉದಯ ರಚಿಸಿರುವ ಮ್ಯೂಸಿಕಲ್ ಸ್ಟಾರ್ಸ್ ಆಫ್ ಕೂರ್ಗ್ (ಇಂಗ್ಲೀಷ್) ಹಾಗೂ ಪುಣ್ಯಮಂದಿರ್ (ಹಿಂದಿ), ಮುಕೋಂಡ ಪುಷ್ಪ ಪೂಣಚ್ಚ ರಚಿಸಿರುವ ಆರೋಗ್ಯ ಮತ್ತು ಸಾಮಾನ್ಯ ರೋಗಗಳಿಗೆ ಗೃಹ ಚಿಕಿತ್ಸೆ ಪುಸ್ತಕ ಬಿಡುಗಡೆಗೊಳ್ಳಲಿವೆ. ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ಜನ್ಮದಿನದಂದೇ ಅವರ ಮೊದಲ ಹಾಗೂ ಎರಡನೇ ಪುಸ್ತಕಗಳು ಪ್ರಕಟಗೊಳ್ಳುತ್ತಿರುವದು ವಿಶೇಷ.
ಕಾರ್ಯಕ್ರಮದಲ್ಲಿ ಕೊಡವರ ಕೈಲ್‍ಪೊಳ್ದ್ ಹಬ್ಬಕ್ಕೆ ಸಂಬಂಧಪಟ್ಟಂತೆ ರಸಪ್ರಶ್ನೆ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆ (ಮಹಿಳೆಯರಿಗೆ ಮಾತ್ರ) ನಡೆಯಲಿದೆ. ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುತ್ತದೆ.
ಕೊಡವ ಮಕ್ಕಡ ಕೂಟ 2013 ರಲ್ಲಿ ಕೊಡವಾಮೆ ಉಳಿವಿಗಾಗಿ ಹುಟ್ಟಿಕೊಂಡ ಸಂಸ್ಥೆ ನಿರಂತರವಾಗಿ ಕೊಡವ ಭಾಷೆಯ ಉಳಿವಿಗಾಗಿ ಹೋರಾಟ ನಡೆಸುತ್ತಾ ಬರುತ್ತಿದ್ದು, ಸಾಹಿತ್ಯ ಚಟುವಟಿಕೆಯಲ್ಲೂ ನಿರಂತರವಾಗಿ ತೊಡಗಿಕೊಂಡಿದೆ. ಕೂಟವೂ ಕೊಡವ ಸಂಸ್ಕøತಿ ಆಚಾರ ವಿಚಾರವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಟ್‍ಪಾಟ್ ಶಿಬಿರ ನಡೆಸಿಕೊಂಡು ಬರುತ್ತಿದೆ. 1965 ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ, ದಿವಾನ್ ಚೆಪ್ಪುಡಿರ ಪೊನ್ನಪ್ಪ, ಅಪ್ಪಚ್ಚಕವಿರ ನೆಪ್ಪು, ಕೊಡವ ಕ್ರೀಡಾಕಲಿಗಳು, ಕೊಡಗ್‍ರ ಸಂಗೀತ ಸಾಹಿತ್ಯ ಕಲಾವಿದಂಗ, ದಿ ಮೇಜರ್ ಹೂ ಕೆಪ್ಟ್ ಕೂಲ್ ಸೇರಿದಂತೆ ಇದುವರೆಗೂ 29 ಕೃತಿಗಳನ್ನು ಪ್ರಕಟಿಸಿದೆ.