ಮಡಿಕೇರಿ, ಸೆ. 13: ಬೆಂಗಳೂರು ಕೊಡವ ಸಮಾಜದಿಂದ ಜರುಗಿದ ‘ಕೈಲ್ಪೊಳ್ದ್’ ಸಂತೋಷಕೂಟದಲ್ಲಿ ಇಂಜಿನಿಯರಿಂಗ್ನಲ್ಲಿ ಶೇ. 98.2 ಅಂಕಗಳಿಸಿ ಸಾಧನೆ ತೋರಿರುವ ಮೂಲತಃ ಅರೆಕಾಡುವಿನವರಾದ ಮೈಸೂರು ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಕುಕ್ಕೇರ ಸಾಯರಿ ಅಯ್ಯಪ್ಪ ಅವರನ್ನು ಕಡೇಮಾಡ ಗಣಪತಿ ಸ್ಮಾರಕ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿದ್ದ ಜಸ್ಟೀಸ್ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು ಸಾಯರಿ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಿದರು. ಈ ಹಿಂದೆ ಶಿಕ್ಷಣ ಇಲಾಖೆಯಲ್ಲಿ ಎ.ಇ.ಓ. ಆಗಿದ್ದ ಇವರ ತಾತ ಕುಕ್ಕೇರ ದಿ. ಮಂದಣ್ಣ ಅವರು ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಚಿನ್ನದ ಪದಕಗಳಿಸಿದ್ದರು. ಸಾಯರಿ ಅರೆಕಾಡುವಿನ ಕುಕ್ಕೇರ ಅಯ್ಯಪ್ಪ ಹಾಗೂ ಸಜನಿ ದಂಪತಿಯ ಪುತ್ರಿ.