ವೀರಾಜಪೇಟೆ, ಸೆ. 13: ಕೊಡಗಿನಲ್ಲಿ ಅತಿವೃಷ್ಟಿಯಿಂದ ಸಾವು- ನೋವುಗಳು ಸಂಭವಿಸಿದ್ದು, ಉತ್ಸವ ಸಮಿತಿಗಳು ಸಂತ್ರಸ್ತರ ನೋವುಗಳಿಗೆ ಸ್ಪಂದಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯ 27 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ಮನೆಪಂಡ ದೇಚಮ್ಮ ಕಾಳಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಡಿ.ಪಿ ರಾಜೇಶ್ ಪದ್ಮಾನಾಭ ಅವರುಗಳು ಮಾತನಾಡಿದರು.

ವೇದಿಕೆಯ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಬಿ. ಹರ್ಷವರ್ಧನ್, ಉದ್ಯಮಿ ಬಿ.ಜೆ. ಬೋಪಣ್ಣ, ಬಿ.ಎಸ್. ಪ್ರಕಾಶ್, ಐತಿಚಂಡ ಸದಾ ಉಪಸ್ಥಿತರಿದ್ದರು.

ಕುಮಾರಿ ಎ.ಸಿ. ತುಷಾಲಿಯನ್ನು ಸನ್ಮಾನಿಸಲಾಯಿತು. ತುಷಾಲಿ ಮತ್ತು ಸಂಗಡಿಗರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಗಣಪತಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಪಿ.ಎ. ಮಂಜುನಾಥ್, ರಾಕೇಶ್ ಬಿದ್ದಪ್ಪ, ಸಮಿತಿಯ ಅಧÀ್ಯಕ್ಷ ನಿತಿನ್, ಮತ್ತು ಸಮಿತಿಯ ಸದಸ್ಯರು ಇದ್ದರು.