ಮಡಿಕೇರಿ, ಸೆ. 14: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ನಗರದ ಜೂನಿಯರ್ ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ನೂತನ ಅಧ್ಯಕ್ಷೆಯಾಗಿ ನಿತೇಶ್ ಮತ್ತು ತಂಡ ಅಧಿಕಾರ ಸ್ವೀಕರಿಸಿತು. ಮಡಿಕೇರಿ ರೋಟರಿಯ ಇಂಟರ್ಯಾಕ್ಟ್ ಸಮಿತಿ ಅಧ್ಯಕ್ಷ ಅನಿಲ್ ಕೃಷ್ಣಾನಿ ಪದಗ್ರಹಣ ನೆರವೇರಿಸಿದರು. ಕ್ಲಬ್ನ ಅಧ್ಯಕ್ಷ ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ ನಿರ್ದೇಶಕರಾದ ಸವಿತಾ ಭಟ್, ಸದಾಶಿವರಾವ್, ಪ್ರಾಂಶುಪಾಲ ವಿಜಯ್ ಹಾಜರಿದ್ದರು.