ಗೋಣಿಕೊಪ್ಪ ವರದಿ, ಸೆ. 13: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದ ಭಗತ್‍ಸಿಂಗ್ ಯುವಕ ಸಂಘದ ಸದಸ್ಯ ಮೋಹನ್ ಅವರಿಗೆ ಆದಿಜಾಂಭವ ಸೇನೆ ಮತ್ತು ಭಗತ್‍ಸಿಂಗ್ ಯುವಕ ಸಂಘದ ಪದಾಧಿಕಾರಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಸುಮಾರು ರೂ. 55 ಸಾವಿರ ನಗದು ಹಣವನ್ನು ಮೋಹನ್ ಕುಟುಂಬಕ್ಕೆ ಹಸ್ತಾಂತರ ಮಾಡಿದರು. ಈ ಹಣದಲ್ಲಿ ಮೋಹನ್ ಪುತ್ರನ ಶಾಲಾ ಶುಲ್ಕ ರೂ. 4,250 ಪಾವತಿ ಮಾಡಲಾಯಿತು. ಆದಿಜಾಂಭವ ಸೇನೆ ಮತ್ತು ಭಗತ್‍ಸಿಂಗ್ ಯುವಕ ಸಂಘದ ಅಧ್ಯಕ್ಷ ಸಿಂಗಿ ಸತೀಶ್, ಪದಾಧಿಕಾರಿಗಳಾದ ವೇಣುಗೋಪಾಲ್, ಕಿಶೋರ್, ಪ್ರದೀಪ್, ಶಿಜು ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.