ಮಡಿಕೇರಿ, ಸೆ. 13 : ಅಂಡಮಾನ್ ದ್ವೀಪದ ರಾಜಧಾನಿ ಪೋರ್ಟ್‍ಬ್ಲೇರ್‍ನಲ್ಲಿ ತಾ.11 ರಂದು ವರ್ಷಾಚರಣೆಯನ್ನು ಆಚರಿಸಲಾಯಿತು.

ಪೋರ್ಟ್‍ಬ್ಲೇರ್‍ನ ಕನ್ನಡ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಉದ್ಘಾಟಿಸಿ, 1893ರ ಸೆಪ್ಟೆಂಬರ್ 11 ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಸಂಸ್ಕøತಿಯನ್ನು ವಿಶ್ವಕ್ಕೆ ಸಾರಿದ ಮಹತ್ವವನ್ನು ಕೊಂಡಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಲಿನ ಕನ್ನಡ ಸಂಘದ ಗೀತಾ ನವೀನ್‍ಭಟ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ. ಲಕ್ಷ್ಮಿ ಆಗಮಿಸಿದ್ದರು. ಕಾರ್ಯಕ್ರಮವನ್ನು ನವೀನ್‍ಚಂದ್ರಭಟ್ ನಿರ್ವಹಿಸಿದರು.

ಈ ಸಂದರ್ಭ ಸಂಘದ ಕುಟ್ಟಂಡ ಅಚ್ಚಯ್ಯ, ಮೂಡೇರ ನವೀನ್ ಅಚ್ಚಯ್ಯ, ರೀನಾ ಅಚ್ಚಯ್ಯ, ಚಾಮೇರ ಬಿ.ನಾಚಪ್ಪ, ಸರಸ್ವತಿ ನಾಚಪ್ಪ, ಮುಕ್ಕಾಟೀರ ಮುತ್ತಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಲೋಕೇಶ್‍ಸಾಗರ್ ಅವರಿಂದ ಕನ್ನಡ ಗೀತಗಾಯನವನ್ನು ಆಯೋಜಿಸಲಾಗಿತ್ತು.