ಮಡಿಕೇರಿ, ಸೆ. 13: ಮೂರ್ನಾಡು ಪದವಿ ಕಾಲೇಜಿನ ಆಶ್ರಯದಲ್ಲಿ ತಾ. 16 ಮತ್ತು 17ರಂದು ಬೆಳಿಗ್ಗೆ 10 ಗಂಟೆಗೆ ಅಂತರಾಷ್ಟ್ರೀಯ ತರಬೇತುದಾರ ರಾಜೀವ್ ಕುಮಾರ್ ಲವ್ ಹಾಗೂ ವಿವೇಕ್ ಪಟ್‍ಕೀ ಪೋರಂ ಆಫ್ ಪ್ರೀ ಎಂಟರ್‍ಪ್ರೈಸ್ ಮುಂಬೈ ನಾಯಕತ್ವದಲ್ಲಿ ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಈ ತರಬೇತಿ ಶಿಬಿರ ನಡೆಯಲಿದೆ ಇದರ ಸದುಪಯೋಗವನ್ನು ಸ್ಥಳೀಯ ಕಾಲೇಜಿನ ಆಸಕ್ತ ಪದವಿ ವಿದ್ಯಾರ್ಥಿಗಳು ಪಡೆದು ಕೊಳ್ಳಬಹುದೆಂದು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.