ಮಡಿಕೇರಿ, ಸೆ. 14: ಗರ್ವಾಲೆಯಲ್ಲಿನ ಭಾರತೀಯ ವಿದ್ಯಾ ಭವನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಡಿಸ್ಕಸ್ ಎಸೆತ, 600 ಮೀಟರ್ ಓಟದಲ್ಲಿ ಪ್ರಿಯಾಂಕ ಕೆ.ಟಿ. (ಪ್ರಥಮ), 400 ಮೀ. ಓಟದಲ್ಲಿ ಪ್ರಿಯಾಂಕ ಕೆ.ಟಿ. (ದ್ವಿತೀಯ) ಉದ್ದ ಜಿಗಿತದಲ್ಲಿ ಎನ್.ಸಚಿನ್ (ಪ್ರಥಮ), ಉದ್ದ ಜಿಗಿತದಲ್ಲಿ ಪೂಜಾ ಕೆ.ಎಂ. (ದ್ವಿತೀಯ), ಡಿಸ್ಕಸ್ ಎಸೆತದಲ್ಲಿ ಪೂಜಾ ಕೆ.ಎಂ. (ತೃತೀಯ), ಎತ್ತರ ಜಿಗಿತದಲ್ಲಿ ಸಚಿನ್ ಎನ್. (ತೃತೀಯ), ಉದ್ದ ಜಿಗಿತದಲ್ಲಿ ಸಹನಾ ಆರ್. (ತೃತೀಯ), ಭಾರದ ಗುಂಡು ಎಸೆತದಲ್ಲಿ ಪೂಜಾ ಕೆ.ಎಂ. (ತೃತೀಯ) ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ದೈಹಿಕ ಶಿಕ್ಷಕ ಹರೀಶ್ ಐಗೂರು ತರಬೇತುದಾರರಾಗಿದ್ದರು.