ಮಡಿಕೇರಿ, ಸೆ.13: ಆಲೂರು ಸಿದ್ದಾಪುರ ಬಳಿಯ ಸುಳುಗೋಡು ಗ್ರಾಮದಲ್ಲಿ ನಡೆದ ವಾಲಿಬಾಲ್ ಕ್ರೀಡಾಕೂಟದಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಪದಕ ಪಡೆದಿದ್ದಾರೆ.
ವಾಲಿಬಾಲ್ ಕ್ರೀಡಾಕೂಟದ ಪಂದ್ಯದಲ್ಲಿ ವಿದ್ಯಾರ್ಥಿಗಳಾದ ಮಹೇಶ್, ಲಿಖಿತ್, ಜೀವನ್, ನಿತಿನ್, ಸತೀಶ್, ಸಂದೀಪ್, ಮಂಜುನಾಥ್ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.