ವೀರಾಜಪೇಟೆ, ಸೆ. 13: ಬಿಲ್ಲವ ಸೇವಾ ಸಮಾಜ ವತಿಯಿಂದ ಶುಕ್ರವಾರ ಅಂಬಟ್ಟಿ ಬಿಟ್ಟಂಗಾಲದ ನಾರಾಯಣ ಗುರು ಮಂದಿರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ ಹಾಗೂ ಜನಾಂಗ ಬಾಂಧವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ತೀರ್ಥನ ಬಿ.ಎಸ್, ದೀನಾ ಬಿ.ಎಂ, ಪ್ರೇಕ್ಷೀತಾ ಬಿ.ಎಸ್, ಗಾನಿತ್ ಬಿ.ಎನ್, ಹೃತಿಕಾ ಬಿ.ಇ, ಎಸ್.ಎಸ್.ಎಲ್.ಸಿಯಲ್ಲಿ ವೇಣು ಅಯ್ಯಪ್ಪ ಬಿ.ಆರ್, ಕೀರ್ತನಾ ಬಿ.ಎಸ್, ಪ್ರದೀಪ್ ಎಂ,ಎಸ್, ಸಹನಾ ಬಿ,ಜಿ, ಶ್ರಾವ್ಯ ಬಿ.,ಎಸ್, ಅನನ್ಯ ಬಿ.ವಿ, ಲಿಷ್ಮಿತಾ ಜಿ.ಜೆ, ತೇಜಸ್ ಬಿ.ಎಂ, ಭೂಮಿಕಾ ಜಿ.ಜೆ, ವರ್ಷ ಬಿ.ಎಸ್ ಇವರುಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ ಗಣೇಶ್, ಗೌರವ ಅಧ್ಯಕ್ಷ ಬಿ.ಆರ್ ರಾಜಾ, ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಜನಾರ್ಧನ್, ಸಹಕಾರ್ಯದರ್ಶಿ ಮಣಿ, ನಿರ್ದೇಶಕ ಬಿ.ಜಿ. ನಾರಾಯಣ್, ವಿಗ್ರಹ ದಾನಿ ಹಳ್ಳಿಗಟ್ಟಿನ ನಾಣು ಉಪಸ್ಥಿತರಿದ್ದರು.