ಕುಶಾಲನಗರ, ಸೆ. 14: ಅಧಿಕಾರಿಯೊಬ್ಬರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುವದರೊಂದಿಗೆ ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಹಿನೆÀ್ನಲೆಯಲ್ಲಿ ಕರ್ನಾಟಕ ಕಾವಲುಪಡೆ ಕೊಡಗು ಘಟಕದ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಎಂಬಾತನನ್ನು ಪೊಲೀಸರು ಕುಶಾಲನಗರದಲ್ಲಿ ಬಂಧಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಮಣ್ಣ ಗೌಡ ಎಂಬವರ ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಕುಶಾಲನಗರ ಪೊಲೀಸರು ಆರೋಪಿಯನ್ನು ಶುಕ್ರವಾರ ತಡರಾತ್ರಿಯಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ರಾಮಣ್ಣ ಗೌಡ ಅವರು ಸೋಮವಾರಪೇಟೆ ಪಿಡಬ್ಲ್ಯುಡಿ ಕಚೆÉೀರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕುಶಾಲನಗರದಲ್ಲಿ ನೆಲೆಸಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಕೃಷ್ಣ ಆಗಾಗ್ಗೆ ಅಧಿಕಾರಿಗೆ ಫೋನ್ ಮೂಲಕ ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಿರುವದಾಗಿ ದೂರಿನಲ್ಲಿ ತಿಳಿಸಿರುವ ರಾಮಣ್ಣಗೌಡ, ಬೇಡಿಕೆ ನಿರಾಕರಿಸಿದ ಹಿನೆÀ್ನಲೆಯಲ್ಲಿ ತನ್ನನ್ನು ಕೊಲೆ ಮಾಡುವದಾಗಿ ಬೆದರಿಕೆ ಹಾಕಿರುವದಾಗಿ ತಿಳಿಸಿದ್ದಾರೆ. ಎರಡು ಬೈಕ್‍ಗಳನ್ನು ನೀಡು ವಂತೆ ಒತ್ತಾಯಿಸಿದ್ದು, ಈ ಬೇಡಿಕೆ ಕೂಡ ನಿರಾಕರಿಸಲಾಗಿತ್ತು. ಇದೇ ಛಾಳಿ ಮುಂದುವರೆಸು ತ್ತಿರುವ ಕೃಷ್ಣ ಮತ್ತೆ ಮೊಬೈಲ್ ಮೂಲಕ (9902361702) ಇಲ್ಲಸಲ್ಲದ ಆರೋಪ ಹೊರಿಸಿ ತಮ್ಮ ವಿರುದ್ಧ ಪ್ರತಿಭಟನೆ ಮಾಡುವದಾಗಿ ಬೆದರಿಕೆ ಒಡ್ಡಿದ್ದಾರೆ.

ಸೆ.7 ರಂದು ರಾತ್ರಿ ಮೊಬೈಲ್ ಸಂಖ್ಯೆ (9449699776) ಮೂಲಕ ವ್ಯಾಟ್ಸಾಪ್‍ನಲ್ಲಿ ಸಂದೇಶ ಕಳಿಸಿದ್ದು ನಿಮ್ಮ ವಿರುದ್ಧ ಹಲವಾರು ದಾಖಲೆಯಿದೆ. ಅತಿ ಶೀಘ್ರವಾಗಿ ಹೋರಾಟ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿಮ್ಮ ಬಗ್ಗೆ ದೂರು ನೀಡಲಾಗುವದು ಎಂದು ಎಚ್ಚರಿಕೆ ನೀಡಿರುವದಾಗಿ ದೂರಿನಲ್ಲಿ ರಾಮಣ್ಣ ಗೌಡ ಮಾಹಿತಿ ಒದಗಿಸಿದ್ದಾರೆ. ಈ ತಿಂಗಳ 11 ರಂದು ಕುಶಾಲನಗರ ಸೋಮೇಶ್ವರ ದೇವಾಲಯ ಬಳಿ ಕೃಷ್ಣ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದು, ತನಗೆ ರಕ್ಷಣೆ ಮತ್ತು ಆರೋಪಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ರಾಮಣ್ಣಗೌಡ ಕೋರಿದ್ದಾರೆ. ಕೃಷ್ಣ ಆಗಾಗ್ಗೆ ಮಾನಸಿಕ ಆಘಾತ, ಕಿರುಕುಳ ನೀಡುತ್ತಿದ್ದು ಸರಕಾರಿ ಕೆಲಸಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಈ ನಡುವೆ ಸೋಮವಾರ ಪೇಟೆ ಲೋಕೋಪ ಯೋಗಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿ ಸಿ.ಪಿ. ಧರ್ಮಲಿಂಗಂ ಎಂಬಾತನ ಕುಮ್ಮಕ್ಕಿನೊಂದಿಗೆ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.

ಧರ್ಮಲಿಂಗಂ ಕರ್ತವ್ಯಕ್ಕೆ ಗೈರು ಹಾಜ ರಾಗುತ್ತಿದ್ದು, ಈ ಹಿಂದೆ ವಂಚನೆ ಪ್ರಕರಣವೊಂದರ ಸಂಬಂಧ ಸೇವೆಯಿಂದ ಅಮಾನತುಗೊಂಡು ಸೋಮವಾರಪೇಟೆ ಕಚೇರಿಯಲ್ಲಿ ವರ್ಗಾವಣೆ ಗೊಂಡು ಕೃಷ್ಣ ಅವರೊಂದಿಗೆ ಶಾಮೀಲಾಗಿ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರ ಒದಗಿಸಿದ್ದಾರೆ.

ಈ ಬಗ್ಗೆ ದಾಖಲೆಗಳೊಂದಿಗೆ ರಾಮಣ್ಣ ಗೌಡ ಅವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ತನಗೆ ನ್ಯಾಯ ಒದಗಿಸಿ ರಕ್ಷಣೆ ನೀಡಬೇಕೆಂದು

(ಮೊದಲ ಪುಟದಿಂದ) ಕೋರಿಕೊಂಡ ಹಿನೆÀ್ನಲೆಯಲ್ಲಿ ಅವರ ಸೂಚನೆಯಂತೆ ಕುಶಾಲನಗರ ಡಿವೈಎಸ್ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ಸ್ಥಳೀಯ ಠಾಣಾಧಿಕಾರಿ ನಂದೀಶ್ ನೇತೃತ್ವದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿ ಕೃಷ್ಣನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವಲುಪಡೆ ಕೃಷ್ಣ ಮತ್ತು ನೌಕರ ಧರ್ಮಲಿಂಗಂ ಮೇಲೆ ಐಪಿಸಿ ಕಾಯ್ದೆ 1860 (506), 341, 353, 384, 34, 114 ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.