ಮೂರ್ನಾಡು, ಸೆ. 12 : ಇಲ್ಲಿನ ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ರಸ್ತೆಯ ಮೇಲೆ ನಿಂತಿದ್ದ ಮಣ್ಣನ್ನು ತೆರವುಗೊಳಿಸಿ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚುವ ಸೇವಾ ಕಾರ್ಯವನ್ನು ಕೈಗೊಂಡರು.
ಮೂರ್ನಾಡು ಕೊಂಡಂಗೇರಿ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ರಸ್ತೆ ಪ್ರತಿ ವರ್ಷ ಮಳೆಯಲ್ಲಿ ರಾಶಿ ಮರಳು ಮಿಶ್ರಿತ ಮಣ್ಣು ತುಂಬಿ ಏರು ತಗ್ಗುಗಳು ನಿರ್ಮಾಣಗೊಂಡು ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗುವ ದರಿಂದ ವಾಹನಗಳು ಸಂಚರಿಸಲು ಕಷ್ಟಕರವಾಗುವದಲ್ಲದೆ ಸಾರ್ವಜನಿಕರು ಶಾಲಾ ಮಕ್ಕಳು ನಡೆದಾಡಲು ಹರಸಾಹಸ ಮಾಡುತ್ತಿದ್ದರು. ಇದನ್ನರಿತ ಸಂಘದ ಅಧ್ಯಕ್ಷ ಅಬೂಬಕರ್ ಮತ್ತು ಸದಸ್ಯರು ಶ್ರಮದಾನ ಕೈಗೊಂಡು ರಸ್ತೆಯಲ್ಲಿ ತುಂಬಿದ ಮರಳು ಮಿಶ್ರಿತ ಮಣ್ಣನ್ನು ತೆರವುಗೊಳಿಸಿದಲ್ಲದೆ, ಗುಂಡಿಗಳನ್ನು ಮುಚ್ಚುವದರ ಮೂಲಕ ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ನಡೆದಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.