ಕೂಡಿಗೆ, ಸೆ. 12: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮ ಕೂಡಿಗೆಯ ತರಬೇತಿ ಕೇಂದ್ರದ. ಆವರಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಪ್ರಬಾರ ಪ್ರಾಂಶುಪಾಲ ಜವರೇಗೌಡ ನೆರವೇರಿಸಿ ನಂತರ ಮಾತಾನಾಡಿ; ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ನೂತನ ಆವಿಷ್ಕಾರಗಳನ್ನು ಮಾಡಿ ಮನುಕುಲದಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಸಂಯೋಜಕ ಕುಮಾರ್ ಪ್ರಾಸ್ತಾವಿಕವಾಗಿ ಮಾತಾನಾಡಿ, ಪ್ರಸ್ತುತ ಅಂತರ ರಾಷ್ಟ್ರೀಯ ರಸಾಯನಶಾಸ್ತ್ರ ವರ್ಷವಾಗಿರುತ್ತದೆ. ರಸಾಯನ ಶಾಸ್ತ್ರದ ಮಹತ್ವ, ಮತ್ತು ವಿಜ್ಞಾನದ ಮಹತ್ವ ತಿಳಿಯಲು ಅತಿ ಮುಖ್ಯವಾದ ಅಂಗವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಸಿದ್ಧೇಶ್, ನಳಿನಾಕ್ಷಿ ಸೇರಿದಂತೆ ವಿವಿಧ ಪ್ರೌಢಶಾಲಾ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಅರು ತಂಡಗಳು, ವಿಜ್ಞಾನ ನಾಟಕದಲ್ಲಿ 5 ತಂಡಗಳು ಭಾಗವಹಿಸಿದ್ದವು.