ಶನಿವಾರಸಂತೆ, ಸೆ. 10: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಮಳೆ ಕ್ಷೀಣಿಸಿದೆ. ಬೆಳಿಗ್ಗೆ ತುಂತುರಾಗಿ ಸುರಿಯಿತು. ನಂತರ ಮೋಡ ಕವಿದ ವಾತಾವರಣವಿದ್ದು, ಗಂಟೆಗೊಮ್ಮೆ ತುಂತುರು ಮಳೆಯ ಸಿಂಚನವಾಯಿತು. ಸೂರ್ಯನ ದರ್ಶನವೂ ಆಗುತ್ತಿತ್ತು. ಆದರೆ ಸಂಜೆ 4ರ ನಂತರ ಮತ್ತೆ ಸಾಧಾರಣ ಮಳೆ ಸುರಿಯಿತು. ಅರ್ಧ ಇಂಚು ಮಳೆಯಾಗಿದೆ. ಗಾಳಿ ಬೀಸುವಿಕೆ ಕಡಿಮೆಯಾದ ಕಾರಣ ಶೀತ ಹಾಗೂ ಚಳಿಯೂ ಕಡಿಮೆಯಾಗಿದೆ.
ಮಳೆ ಸಾಕಾಗಿ ಹೋಯಿತು. ಸಾಕಪ್ಪ ಸಾಕು ಅನಿಸುತ್ತಿದೆ. ಬಿಸಿಲಾಗಿ ಎರಡು-ಮೂರು ಮಳೆಯಾದರೆ ಒಳ್ಳೆಯದು. ಗದ್ದೆಯಲ್ಲಿ ಭತ್ತದ ಪೈರು ಚೆನ್ನಾಗಿ ಬರುತ್ತದೆ. ಕಳೆ ತೆಗೆದಾಯ್ತು. ಇನ್ನು ಕೊಯ್ಲಿನವರೆಗೆ ಬಿಡುವು. ಕೆಲಸವಿಲ್ಲ. ಇನ್ನು ಮಳೆ ಬಾರದಿದ್ದರೆ ಅನುಕೂಲ ಎಂದು ರೈತರಾದ ಅಪ್ಪಶೆಟ್ಟಳ್ಳಿ ಗ್ರಾಮದ ಎ.ಡಿ. ದೊಡ್ಡಪ್ಪ ಹಾಗೂ ಕಾಜೂರು ಚಂದ್ರಣ್ಣ ಬೇಸರ ವ್ಯಕ್ತಪಡಿಸಿದರು.