ಸಿದ್ದಾಪುರ, ಸೆ. 10: ಪ್ರವಾಹದಿಂದ ಹಾನಿಗೊಳಗಾದ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ವ್ಯಾಪ್ತಿಯಲ್ಲಿ ಮನೆಗಳ ಹಾನಿಯ ಬಗ್ಗೆ ಮರು ಸಮೀಕ್ಷೆ ಕಾರ್ಯ ನಡೆಸಲಾಯಿತು. ಈ ಹಿಂದೆ ಸಮೀಕ್ಷೆ ನಡೆಸಿದ ಸಂದರ್ಭ ಮನೆಗಳ ಹಾನಿಯ ಪ್ರಮಾಣದಲ್ಲಿ ವ್ಯತ್ಯಾಸವಿದ್ದು, ಮರು ಸಮೀಕ್ಷೆ ಮಾಡಬೇಕೆಂದು ಗುಹ್ಯ ಹೋರಾಟ ಸಮಿತಿ ಒತ್ತಾಯಿಸಿ, ಗ್ರಾಮಸ್ಥರೇ ಮನೆಗಳ ಹಾನಿಯ ಸರ್ವೆ ನಡೆಸಿ, ವರದಿಯನ್ನು ಅಧಿಕಾರಿಗಳಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮನೆಗಳು ಕುಸಿದಿರುವದು ಹಾಗೂ ಹಾನಿಯಾಗಿರುವ ಬಗ್ಗೆ ಮರು ಸರ್ವೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಪಿ.ಡಬ್ಲ್ಯೂ.ಡಿ ಇಂಜಿನಿಯರ್ ಸುಬ್ಬಯ್ಯ, ಕಂದಾಯ ಪರಿವೀಕ್ಷಕ ನಾಗೇಶ್ ರಾವ್, ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್, ಸಹಾಯಕ ಕೃಷ್ಣ, ಮಂಜು ಇದ್ದರು.