ಸೋಮವಾರಪೇಟೆ, ಸೆ. 10: ಸಮೀಪದ ಅಬ್ಬೂರುಕಟ್ಟೆ ಗ್ರಾಮದ ಸಂತ ಲಾರೆನ್ಸ್ ಚರ್ಚ್‍ನಲ್ಲಿ ಮಾತೆ ಮರಿಯಮ್ಮನವರ ಜಯಂತಿಯನ್ನು ಆಚರಿಸಲಾಯಿತು. ಧರ್ಮಗುರುಗಳಾದ ಸ್ವಾಮಿ ಜೋಸೆಫ್ ಅಲೆಗ್ಸಾಂಡರ್ ಬಲಿಪೂಜೆಯನ್ನು ನೆರವೇರಿಸಿದರು. ನಂತರ ಮಾತನಾಡಿ, ಏಸುವಿನ ತಾಯಿಯಾದ ಮಾತೆ ಮರಿಯಮ್ಮನವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಖಾಲಿಸ್ತ, ಫ್ಲೇವಿ ಡಿಸಿಲ್ವ, ಫ್ರಾನ್ಸಿಸ್ ಲೋಬೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.