*ನಾಪೆÇೀಕ್ಲು, ಸೆ. 11: ಸ್ಥಳೀಯ ನಿವಾಸಿ ನಿವೃತ್ತ ಪ್ರಾಂಶುಪಾಲ ಪ್ರೊ. ಬಿದ್ದಾಟಂಡ ಸಿ. ಪೆÇನ್ನಪ್ಪ (96) ತಾ, 10 ರಂದು ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಮೃತರು ಬಿದ್ದಾಟಂಡ ಕುಟುಂಬದ ಪಟ್ಟೇದಾರರಾಗಿದ್ದು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾಗಿ, ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿ, ನಾಪೆÇೀಕ್ಲು ಪದವಿ ಕಾಲೇಜಿನ ಸ್ಥಾಪಕ ಉಪಾಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಸಾಧು ಸ್ವಭಾವದ, ಶ್ರಮ ಜೀವಿಯಾಗಿದ್ದ ಇವರು ಪತ್ನಿ, ಓರ್ವ ಪುತ್ರ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 12 ರಂದು (ಇಂದು) 3 ಗಂಟೆಗೆ ಕೊಳಕೇರಿ ಗ್ರಾಮದ ಕುಟುಂಬದ ರುದ್ರಭೂಮಿಯ ಸ್ಮಶಾನದಲ್ಲಿ ನಡೆಯಲಿದೆ.

ನಾಪೋಕ್ಲುವಿನ ಡಾ. ಸಣ್ಣುವಂಡ ಎಂ. ಕಾವೇರಪ್ಪ ಸಂತಾಪ ಸೂಚಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಕೋರಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಬುಧವಾರ ಮೌನಾಚರಿಸಿದರು. ಇತಿಹಾಸ ಪ್ರಾಧ್ಯಾಪಕರಾಗಿದ್ದ ಪ್ರೊ. ಬಿ.ಸಿ. ಪೊನ್ನಪ್ಪ ಅವರು 1969 ರಿಂದ 1981ರ ಅವಧಿಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.