ವೀರಾಜಪೇಟೆ, ಸೆ. 10: ಬಿಲ್ಲವ ಸೇವಾ ಸಮಾಜ ವತಿಯಿಂದ ತಾ. 13 ರಂದು ಅಂಬಟ್ಟಿ ಬಿಟ್ಟಂಗಾ ಲದ ನಾರಾಯಣ ಗುರು ಮಂದಿರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ ಹಾಗೂ ಜನಾಂಗ ಬಾಂಧವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಬಿ.ಎಂ. ಗಣೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣೇಶ್ ಅವರು, ಪ್ರತಿಭಾ ಪುರಸ್ಕಾರಕ್ಕೆ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇ. 80ಕ್ಕಿಂತ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಗಣೇಶ್ 9945526358. ನಾರಾಯಣ್ 9008506250 ಇವರನ್ನು ಸಂಪರ್ಕಿಸಲು ಕೋರಿದ್ದಾರೆ. ಗೋಷ್ಠಿಯಲ್ಲಿ ಖಜಾಂಚಿ ಬಿ.ಎಂ ಸತೀಶ್, ನಿರ್ದೇಶಕ ನಾರಾಯಣ್ ಉಪಸ್ಥಿತರಿದ್ದರು.