ಗೋಣಿಕೊಪ್ಪ ವರದಿ, ಸೆ. 10: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಜೆಸಿಐ ಸಪ್ತಾಹ ಕಾರ್ಯಕ್ರಮಕ್ಕೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಚಾಲನೆ ನೀಡಲಾಯಿತು. ಸುಮಾರು 300 ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಯಿತು. ಸಪ್ತಾಹಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕ ಬಿ. ಎಂ. ವಿಜಯ್ ಚಾಲನೆ ನೀಡಿದರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ವೀರಾಜಪೇಟೆ ದಂತ ಮಹಾವಿದ್ಯಾಲಯದ ವೈದ್ಯರಾದ ಡಾ. ಕಾಂತೇಶ್, ಜೆಸಿಐ ಪೊನ್ನಂಪೇಟೆ ಗೋಲ್ಡನ್ ಯೋಜನಾಧಿಕಾರಿ ಮತ್ರಂಡ ಬೋಪಣ್ಣ, ಸದಸ್ಯರಾದ ಸುಮಿ ರಾಬಿನ್, ಮಂಡಂಗಡ ಪುನಿತಾ, ಚೆಪ್ಪುಡೀರ ಸುಜು, ಸಿಆರ್‍ಪಿ ತಿರಿನೆಲ್ಲಿಮಾಡ ಜೀವನ್ ಉಪಸ್ಥಿತರಿದ್ದರು.