ಶ್ರೀಮಂಗಲ, ಸೆ. 10: ದಕ್ಷಿಣ ಕೊಡಗಿನ ಪ್ರಮುಖ ರಸ್ತೆಗಳು ಮಹಾಮಳೆಯಿಂದ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ಗೋಣಿಕೊಪ್ಪ - ಪೆÇನ್ನಂಪೇಟೆ ರಸ್ತೆ, ಪೆÇನ್ನಂಪೇಟೆ, ಹುದಿಕೇರಿ, ಕುಟ್ಟ ರಸ್ತೆ, ಪೆÇನ್ನಂಪೇಟೆ, ಕಾನೂರು, ಕುಟ್ಟ ರಸ್ತೆ ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದಿದೆ.

ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ಆಳ ತಿಳಿಯದೇ ವಾಹನಗಳು ಗುಂಡಿಗಳಿಗೆ ಬೀಳುತ್ತಿವೆ. ಈ ರಸ್ತೆಗಳಲ್ಲಿ ಬರುವ ಹೊಸಬರಿಗೆ ದಿಢೀರಾಗಿ ಎದುರಾಗುವ ಗುಂಡಿಗಳಿಂದ ಅದನ್ನು ತಪ್ಪಿಸಲಾಗದೆ ಹಾನಿಯಾಗುತ್ತಿದೆ. ದ್ವಿಚಕ್ರ ವಾಹನ ಗಳಿಗಂತೂ ಇವು ಯಮಗುಂಡಿ ಗಳಾಗಿದೆ. ಪೆÇನ್ನಂಪೇಟೆ ಪಟ್ಟಣದಲ್ಲಿ ಬಸ್ ನಿಲ್ದಾಣದ ಸಮೀಪವೇ ದೊಡ್ಡ ಗುಂಡಿಗಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಮಾಕುಟ್ಟ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಭೂಕುಸಿತ ದಿಂದ ಹಾನಿಯಾಗಿರುವದ ರಿಂದ ಕೇರಳ ರಾಜ್ಯಕ್ಕೆ ದಕ್ಷಿಣ ಕೊಡಗಿನ ಪೆÇನ್ನಂಪೇಟೆ - ಕಾನೂರು – ಕುಟ್ಟ ಮತ್ತು ಪೆÇನ್ನಂಪೇಟೆ-ಹುದಿಕೇರಿ, ಕುಟ್ಟ ರಸ್ತೆಯ ಮೂಲಕ ರಸ್ತೆಯ ಮೂಲಕ ಕೇರಳಕ್ಕೆ ಹೆಚ್ಚಿನ ವಾಹನಗಳು ಸಂಚರಿಸುತ್ತಿರುವದರಿಂದ ಈ ರಸ್ತೆಯ ಮೇಲೆ ಮಳೆಗಾಲದಲ್ಲಿ ಹೆಚ್ಚಿನ ಒತ್ತಡ ಬಿದ್ದು, ಅಲ್ಲಲ್ಲಿ ರಸ್ತೆ ಹಾಳಾಗಿದೆ. ಸಣ್ಣ ಪ್ರಮಾಣದಲ್ಲಿರುವ ಗುಂಡಿಗಳು ಇದೀಗ ಸುರಿದ ಮಳೆಯಿಂದ ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿವೆ. ಇಂತಹ ಗುಂಡಿಗಳಿಗೆ ವಾಹನಗಳು ಬಿದ್ದು, ವಾಹನಕ್ಕೆ ಹಾನಿ ಹಾಗೂ ದ್ವಿಚಕ್ರ ವಾಹನಗಳ ಸವಾರರಿಗೆ ಜೀವಕ್ಕೆ ಕಂಟಕವಾಗುವದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖೆ ಕೂಡಲೇ ಜಲ್ಲಿ ಹಾಕಿ ತಾತ್ಕಾಲಿಕವಾಗಿ ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.