ವೀರಾಜಪೇಟೆ, ಸೆ: 10ಭಾರೀ ಮಳೆಯ ಹಿನ್ನೆಲೆಯಲ್ಲಿ ಆಸ್ತಿ ಪಾಸ್ತಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ದಕ್ಷಿಣ ಕೊಡಗಿನಾದ್ಯಂತ ಪೈಸಾರಿ ಜಾಗ ಹಾಗೂ ಅಕ್ರಮ ಒತ್ತುವರಿ ಜಾಗ ಪತ್ತೆಗಾಗಿ ನಿನ್ನೆಯಿಂದ ಗುಹ್ಯ ಗ್ರಾಮದಿಂದ ಕಾರ್ಯಾಚರಣೆ ಆರಂಭಿಸಿರುವದಾಗಿ ತಾಲೂಕು ತಹಶೀಲ್ದಾರ್ ಕೆ.ಪುರಂದರ ಅವರು ತಿಳಿಸಿದ್ದಾರೆ.ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ಸರ್ವೆ ಸಮೀಕ್ಷೆ ಪ್ರಕಾರ 7 ಎಕರೆ ಅಕ್ರಮ ಒತ್ತುವರಿ ಮಾಡಿ ತೋಟ ಮಾಡಿರುವದು ದಾಖಲೆ ಸಹಿತ ಒತ್ತುವರಿ ಪತ್ತೆಯಾಗಿರುª Àದರಿಂದ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಸಿದ್ದಾಪುರ ಗುಹ್ಯದಲ್ಲಿಯೂ ನಿನ್ನೆ ದಿನ ಸರ್ವೆ ಕಾರ್ಯಾರಂಭವಾಗಿದ್ದು, ಇನ್ನು ಸರ್ವೆ ಇಲಾಖೆಯಿಂದ ಅಂತಿಮ ವರದಿ ಬಂದಿಲ್ಲ. ದಕ್ಷಿಣ ಕೊಡಗಿನ ಯಾವದೇ ಭಾಗದಲ್ಲಿ ಅಕ್ರಮ ಒತ್ತುವರಿ ಯಾಗಿದ್ದರೂ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಜಾಗ ತೆರವು ಮಾಡಲಾಗುವದು. ಸರಕಾರದ ಪುನರ್ವಸತಿ ಯೋಜನೆಯ ಪ್ರಕಾರ ಪುನರ್ವಸತಿ

(ಮೊದಲ ಪುಟದಿಂದ) ಕೇಂದ್ರಕ್ಕೆ ಒತ್ತುವರಿ ತೆರವಿನ ಜಾಗ ಹಾಗೂ ಆಯ್ದ ಭಾಗಗಳಲ್ಲಿರುವ ಪೈಸಾರಿ ಜಾಗವನ್ನು ಬಳಸಲಾಗುವದು.

ಈಗಾಗಲೇ ತಾಲೂಕಿನ 27 ಪರಿಹಾರ ಕೇಂದ್ರದ ಮಾಹಿತಿ ಪ್ರಕಾರ 4300 ಮಂದಿ ಸಂತ್ರಸ್ತರಿದ್ದು ಇನ್ನು ಬೆಟ್ಟದ ಪ್ರದೇಶದಲ್ಲಿರುವ ಎಲ್ಲರಿಗೂ ಪುನರ್ವಸತಿ ಕಲ್ಪಿಸಲು ಯೋಜನೆಯಲ್ಲಿ ಕ್ರಮಕೈಗೊಳ್ಳಲಾಗುವದು. ಸಿದ್ದಾಪುರ ವಿಭಾಗದ ಮಾಲ್ದಾರೆ, ಬೈರಂಬಾಡ, ಹಾಲುಗುಂದದಲ್ಲಿ ಪೈಸಾರಿ ಪತ್ತೆ ಹಾಗೂ ಅಕ್ರಮ ಒತ್ತುವರಿ ತೆರವಿನ ಕಾರ್ಯ ಸದÀ್ಯದಲ್ಲಿಯೇ ಕೈಗೊಳ್ಳಲಾಗುವದು ಎಂದು ಪುರಂದರ ತಿಳಿಸಿದ್ದಾರೆ.