ಶ್ರೀಮಂಗಲ, ಸೆ. 10: ಪೆÇನ್ನಂಪೇಟೆಯಲ್ಲಿ ರೂ. 1.15 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇಗ್ಗುತ್ತಪ್ಪ ಸಹಕಾರ ಸಂಘದ ಕಟ್ಟಡವನ್ನು ಮತ್ತು ನಾಮಫಲಕವನ್ನು ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮದ್ರೀರ ಗಿಣಿಸೋಮಯ್ಯ ಮಂಗಳವಾರ ಉದ್ಘಾಟಿಸಿದರು.

ಪೆÇನ್ನಂಪೇಟೆಯಲ್ಲಿ 2007ರಲ್ಲಿ ಸ್ಥಾಪಿಸಲಾದ ಇಗ್ಗುತ್ತಪ್ಪ ಸಹಕಾರ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 48 ಕೋಟಿ ವ್ಯವಹಾರ ನಡೆಸಿರುವದು ಹೆಮ್ಮೆಯ ವಿಷಯ. ಸಂಘದ ಕಟ್ಟಡ ಇದುವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಸ್ವಂತ ಕಟ್ಟಡದಲ್ಲಿ ಸಂಘದ ವ್ಯವಹಾರ ನಡೆಸಬೇಕೆನ್ನುವ ಕನಸು ಇದೀಗ ಹೊಸ ಕಟ್ಟಡ ಉದ್ಘಾಟನೆಯ ನಂತರ ಶ್ರೀಮಂಗಲ, ಸೆ. 10: ಪೆÇನ್ನಂಪೇಟೆಯಲ್ಲಿ ರೂ. 1.15 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇಗ್ಗುತ್ತಪ್ಪ ಸಹಕಾರ ಸಂಘದ ಕಟ್ಟಡವನ್ನು ಮತ್ತು ನಾಮಫಲಕವನ್ನು ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮದ್ರೀರ ಗಿಣಿಸೋಮಯ್ಯ ಮಂಗಳವಾರ ಉದ್ಘಾಟಿಸಿದರು.

ಪೆÇನ್ನಂಪೇಟೆಯಲ್ಲಿ 2007ರಲ್ಲಿ ಸ್ಥಾಪಿಸಲಾದ ಇಗ್ಗುತ್ತಪ್ಪ ಸಹಕಾರ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 48 ಕೋಟಿ ವ್ಯವಹಾರ ನಡೆಸಿರುವದು ಹೆಮ್ಮೆಯ ವಿಷಯ. ಸಂಘದ ಕಟ್ಟಡ ಇದುವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಸ್ವಂತ ಕಟ್ಟಡದಲ್ಲಿ ಸಂಘದ ವ್ಯವಹಾರ ನಡೆಸಬೇಕೆನ್ನುವ ಕನಸು ಇದೀಗ ಹೊಸ ಕಟ್ಟಡ ಉದ್ಘಾಟನೆಯ ನಂತರ ಸಂಘದಲ್ಲಿರುವ 1500ಕ್ಕೂ ಹೆಚ್ಚು ಸದಸ್ಯರ ಬೆಂಬಲ ಹಾಗೂ ಸಂಘದ ಪ್ರಗತಿಯಿಂದ ಸಾಧ್ಯವಾಗಿದೆ ಎಂದು ಗಿಣಿ ಸೋಮಯ್ಯ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಕಟ್ಟಡದ ಮುಖ್ಯ ದ್ವಾರವನ್ನು ಉಪಾಧ್ಯಕ್ಷರಾದ ಕಡೇಮಾಡ ಮಣಿಭೀಮಯ್ಯ, ನಿರ್ದೇಶಕರುಗಳಾದ ಕಳ್ಳಿಚಂಡ ಡಾಲಿಕುಶಾಲಪ್ಪ, ಕಬ್ಬಚ್ಚೀರ ಚಿದಂಬರ ಅವರು ಜಂಟಿಯಾಗಿ ಉದ್ಘಾಟಿಸಿದರು.

ಕಟ್ಟಡದಲ್ಲಿರುವ ಭದ್ರತಾ ಕೊಠಡಿ, ಗ್ರಾಹಕರ ಲಾಕರ್ ಅನ್ನು ನಿರ್ದೇಶಕರಾದ ಚಿರಿಯಪಂಡ ಕಾಶಿಯಪ್ಪ ಮತ್ತು ಕಬ್ಬಚ್ಚೀರ ಚಿದಂಬರ ಉದ್ಘಾಟಿಸಿದರು. ಸಂಘದ ಕಟ್ಟಡದಲ್ಲಿರುವ ಸಭಾಂಗಣವನ್ನು ನಿರ್ದೇಶಕರುಗಳಾದ ಕೋದೇಂಗಡ ಎಸ್. ಸುರೇಶ್, ಅರಮಣಮಾಡ ಮಿಟ್ಟು ಬೋಪಯ್ಯ, ಐನಂಡ ಕೆ. ಮಂದಣ್ಣ ಜಂಟಿಯಾಗಿ ಉದ್ಘಾಟಿಸಿದರು.

ಸಂಘದ ನಿರ್ದೇಶಕರುಗಳಾದ, ಅಲೇಮಾಡ ಎ. ಶ್ರೀನಿವಾಸ್, ಕೂಕಂಡ ರಾಜಾಕಾವೇರಪ್ಪ, ಕುಲ್ಲಚಂಡ ಪ್ರಭುನಂಜಪ್ಪ, ಮುದ್ದಿಯಡ ಪ್ರಕಾಶ್, ಮಾಣಿಪಂಡ ಪಾರ್ವತಿ, ಡಾ. ನೆಲ್ಲೀರ ನಿಖಿತ ಸಚಿನ್, ಮತ್ತು ಸಿ.ಇ.ಓ ಮದ್ರೀರ ಎಸ್. ಗಣಪತಿ ಹಾಜರಿದ್ದರು.