ಗೋಣಿಕೊಪ್ಪಲು, ಸೆ. 10: ಇಂಜಿನಿಯರಿಂಗ್ ವಿದ್ಯಾಭ್ಯಾಸ ದಲ್ಲಿ ಉತ್ತಮ ಅಂಕ ಪಡೆದ ಗೋಣಿಕೊಪ್ಪಲುವಿನ ಮಲ್ಚೀರ ದೇಚಮ್ಮ (ಸೋನಾ) ಅವರನ್ನು ಬೆಂಗಳೂರು ಕೊಡವ ಸಮಾಜದ ವತಿಯಿಂದ ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು. ಇದೀಗ ಬೆಂಗಳೂರಿನ ಯುಎಸ್ಎ ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ನಲ್ಲಿ ಉದ್ಯೋಗದಲ್ಲಿರುವ ದೇಚಮ್ಮ ಗೋಣಿಕೊಪ್ಪಲುವಿನ ಉದ್ಯಮಿ ಮಲ್ಚೀರ ಗಾಂದಿದೇವಯ್ಯü ಹಾಗೂ ಗುಲಾಬಿ ಗಾಂಧಿ ಇವರ ಪುತ್ರಿಯಾಗಿದ್ದಾರೆ.