ಮಡಿಕೇರಿ, ಸೆ. 10: ಸೆಸ್ಕ್, ಮಡಿಕೇರಿ ವಿಭಾಗಕ್ಕೆ ಸೇರಿದ ಉಪ ವಿಭಾಗಗಳಾದ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಗೋಣಿಕೊಪ್ಪಲು ಹಾಗೂ ವಿರಾಜಪೇಟೆ ವ್ಯಾಪ್ತಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಎಲ್.ಟಿ (4)ಎ ನೀರಾವರಿ ಪೆಂಪ್ಸೆಟ್ಗಳ ವಿದ್ಯುತ್ ಸಂಪರ್ಕ ಹೊಂದಿರುವ ಎಸ್ಸಿ, ಎಸ್ಟಿ ಗ್ರಾಹಕರಿಂದ ಮಾಹಿತಿ ಪಡೆದುಕೊಂಡು ಸರ್ಕಾರಕ್ಕೆ ಸಲ್ಲಿಸಬೇಕಿರುತ್ತದೆ. ಎಸ್ಸಿ, ಎಸ್ಟಿ ಗ್ರಾಹಕರು ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಸ್ಥಿರ ಮೊಬೈಲ್ ಸಂಖ್ಯೆ, ರಶೀದಿಯನ್ನು ತಮ್ಮ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಶಾಖಾಧಿಕಾರಿಗಳ ಕಚೇರಿ/ ಸೆಸ್ಕ್ ಉಪ ವಿಭಾಗ ಕಚೇರಿಗೆ ಅಗತ್ಯ ದಾಖಲೆಯೊಂದಿಗೆ ಮಾಹಿತಿಗಳನ್ನು ಸಲ್ಲಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಅವರು ತಿಳಿಸಿದ್ದಾರೆ.