ಗೋಣಿಕೊಪ್ಪ ವರದಿ, ಸೆ. 10: ಇತ್ತೀಚೆಗೆ ಪಾಲಿಬೆಟ್ಟದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ಮರ್ದಯ್ ಅವರ ಕುಟುಂಬಕ್ಕೆ ಶಾಸಕ ಕೆ. ಜಿ. ಬೋಪಯ್ಯ ರೂ. 5 ಲಕ್ಷ ಚೆಕ್ ವಿತರಣೆ ಮಾಡಿದರು. ಪೊನ್ನಂಪೇಟೆ ಶಾಸಕರ ಕಚೇರಿಯಲ್ಲಿ ಮರ್ದಯ್ ಅವರ ಮಗಳು ರೂಪಿಣಿ ಚೆಕ್ ಸ್ವೀಕರಿಸಿದರು.
ತಿತಿಮತಿ ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಅಶೋಕ್, ಚೆನ್ನಯ್ಯನಕೋಟೆ ಗ್ರಾ. ಪಂ. ಸದಸ್ಯ ವಿಜು, ಪ್ರಮುಖರಾದ ಮಲ್ಲಂಡ ಮದು, ಸುಂದರ್ ಉಪಸ್ಥಿತರಿದ್ದರು.