ನಾಪೋಕ್ಲು, ಸೆ. 10 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಾಮಳೆಯಿಂದ ತೊಂದರೆಗೊಳಗಾದ ಸುಮಾರು 500 ಕುಟುಂಬಗಳಿಗೆ ದಿನಬಳಕೆಯ ಅಗತ್ಯ ಸಾಮಗ್ರಿಗಳ ಕಿಟ್‍ಗಳನ್ನು ಸಿದ್ದಾಪುರ, ವೀರಾಜಪೇಟೆ, ಮೂರ್ನಾಡು ಹಾಗೂ ನಾಪೆÇೀಕ್ಲುವಿನ ಯೋಜನೆಯ ಕಚೇರಿಗಳಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸದಾಶಿವ ಗೌಡ, ಕೃಷಿ ಅಧಿಕಾರಿ ಚೇತನ್ ಕೆ., ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ವಲಯ ಮೇಲ್ವಿಚಾರಕ ಪ್ರದೀಪ್ ರೈ ಹಾಗೂ ಪದಾಧಿಕಾರಿಗಳು ಇದ್ದರು.