ಕರಿಕೆ, ಸೆ. 10: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಎಂಬಲ್ಲಿ ಮುಳ್ಳುಹಂದಿಗಳು ತೆಂಗಿನ ಗಿಡಗಳನ್ನು ತಿಂದು ನಾಶಮಾಡಿವೆ. ಇಲ್ಲಿನ ನಿವಾಸಿ ಆರ್.ಎಂ.ಸಿ. ಸದಸ್ಯ ಕೆ.ಎ. ನಾರಾಯಣ ಎಂಬವರ ತೋಟಕ್ಕೆ ನಿರಂತರವಾಗಿ ದಾಳಿ ಮಾಡಿ ಸುಮಾರು ಹತ್ತಕ್ಕೂ ಅಧಿಕ ಹಾಗೂ ಫಸಲು ಬಿಡಲು ತಯಾರಾಗಿದ್ದ ತೆಂಗಿನ ಗಿಡಗಳನ್ನು ತಿಂದು ನಷ್ಟ ಉಂಟು ಮಾಡಿದೆ.