ಸುಂಟಿಕೊಪ್ಪ: ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ದೇವಯ್ಯ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಕೊಡಗರಹಳ್ಳಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮರವಣಿಗೆ ನಡೆಸಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು, ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಇದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿ ಶ್ರೀ ವೀರಾಂಜನೇಯ ಯುವಕ ಸಂಘ ಅಶ್ರಯದಲ್ಲಿ ಗೌರಿ ಗಣೇಶೋತ್ಸವ ನೆರವೇರಿತು. ತಾ. 2 ರ ಚೌತಿಯಂದು ನರೇಂದ್ರ ಮೋದಿ ಭವನದಲ್ಲಿ ಪ್ರತಿಷ್ಠಾಪಿಸಿ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದರು. ವಿದ್ಯುತ್ ಅಲಂಕೃತ ಮಂಟಪದಲ್ಲಿ ಮೆರವಣಿಗೆಯೊಂದಿಗೆ ರಾತ್ರಿ ಭೂತನಕಾಡು ಕೆರೆಯಲ್ಲಿ ವಿಸರ್ಜಿಸಲಾಯಿತು.ಗುಡ್ಡೆಹೊಸೂರು: ಇಲ್ಲಿನ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು. ಉತ್ಸವ ಮೂರ್ತಿಗೆ ಮಹಾಪೂಜೆ ನೆರವೇರಿಸಿ ಅನ್ನಸಂತರ್ಪಣೆ ನೆರವೇರಿತು.
4 ಗ್ರಾಮಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಶ್ರೀ ವಿನಾಯಕ ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಗುಡ್ಡೆಹೊಸೂರಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು. ಉತ್ಸವ ಮೂರ್ತಿಯನ್ನು ಸ್ಥಳೀಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಕುಶಾಲನಗರ: ಕುಶಾಲನಗರ ಕರಿಯಪ್ಪ ಬಡಾವಣೆಯಲ್ಲಿ ಕರಿಯಪ್ಪ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ಪಟ್ಟಣದ ಶ್ರೀ ಅಯ್ಯಪ್ಪ ದೇವಾಲಯ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಶ್ರೀ ಮಹಾಗಣಪತಿಗೆ ಮಹಾಪೂಜೆ ನಂತರ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.ಗೋಣಿಕೊಪ್ಪಲು: ಇಲ್ಲಿನ ಪಂಚಾಯಿತಿ ಪೌರಕಾರ್ಮಿಕರು ಇದೇ ಮೊದಲ ಬಾರಿಗೆ ಗೌರಿ-ಗಣೇಶ ಪ್ರತಿಷ್ಠಾಪಿಸಿದ್ದರು. ಏಳು ದಿನಗಳ ನಂತರ ಗಣೇಶ ವಿಸರ್ಜನೆ ಮಾಡಿದರು.
ಈ ಸಂದರ್ಭ ಪ್ರಮುಖರಾದ ಅಭಿ, ಗೌರಿ, ವಿಜಿ, ಕುಮಾರ್, ನಾಗೇಂದ್ರ, ಅರವಿಂದ್, ಯೊಗೇಶ್ ಮುಂತಾದವರು ಹಾಜರಿದ್ದರು.