*ಗೋಣಿಕೊಪ್ಪಲು, ಸೆ. 9: ಒಡಿಸ್ಸಾದ ರೂರ್ಕೆಲಾದಲ್ಲಿ ನಡೆದ ಐಸಿಎಸ್ ಸಿಇ ಶಾಲೆಯ 17 ವರ್ಷದೊಳಗಿನ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪಲಿನ ಕೂರ್ಗೂ ಪಬ್ಲಿಕ್ ಶಾಲೆಯ (ಕಾಪ್ಸ್) 8 ಮಂದಿ ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಶಿಪ್ ಪಡೆದುಕೊಂಡರು.
ತಂಡದಲ್ಲಿ ಭುವನ್ ಬೋಪಣ್ಣ, ಲೆನ್ ಅಯ್ಯಣ್ಣ, ಶಿಶೂಲ್ ಅಯ್ಯಪ್ಪ, ತಶಿನ್ ತಮ್ಮಯ್ಯ, ಪ್ರತಿಕ್ ಪೊನ್ನಣ್ಣ, ಕೆ.ಎನ್. ದೇವಯ್ಯ, ಧನುಷ್ ಮಾಚಯ್ಯ, ಎಂ. ಷಣ್ಮುಖ ಪಾಲ್ಗೊಂಡಿದ್ದರು. ಆಯ್ಕೆ ಸಮಿತಿ ಗಮನಸೆಳೆದ ಭುವನ್ ಬೋಪಣ್ಣ, ಲೆನ್ ಅಯ್ಯಣ್ಣ, ತಶಿನ್ ತಮ್ಮಯ್ಯ ಸ್ಕೂಲ್ ಗೇಮ್ಸ್ ಪೆÀಡರೇಷನ್ ಆಫ್ ಇಂಡಿಯಾ (ಎಸ್‍ಜಿಎಫ್‍ಅ)ಕ್ಕೆ ಆಯ್ಕೆಯಾದರು. ಈ ಟೂರ್ನಿ ಚಂಡಿಘರ್‍ನಲ್ಲಿ ನಡೆಯಲಿದೆ.
19 ವರ್ಷದೊಳಗಿನ ಮತ್ತೊಂದು ತಂಡದಲ್ಲಿ ಪಾಲ್ಗೊಂಡಿದ್ದ ಇದೇ ಶಾಲೆಯ ದ್ರುವ ಉತ್ತಪ್ಪ, ದೇಶ್ ಬೋಪಯ್ಯ, ಕೆ.ಎಸ್. ಅಮೋಘ್ ಉತ್ತಮ ಆಟವಾಡಿದರು. ಮಿಲನ್, ಬಿದ್ದಪ್ಪ ತರಬೇತುದಾರರಾಗಿದ್ದರು.
-ಎನ್.ಎನ್. ದಿನೇಶ್