ಮಡಿಕೇರಿ, ಸೆ.9: ತಲಕಾವೇರಿಯಲ್ಲಿ ತಾ. 11 ರ ಬುಧವಾರ ಬೆ. 11 ಗಂಟೆಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಕೊಡಗಿನಲ್ಲಿ ಅತಿವೃಷ್ಟಿ, ಭೂಕುಸಿತ, ಪ್ರವಾಹದಿಂದ ಸಂಭವಿಸುತ್ತಿರುವ ದುರಂತ, ಸಂಕಷ್ಟಗಳಿಂದ ಪಾರು ಮಾಡುವಂತೆ ಶ್ರೀ ಅಗಸ್ತ್ಯೇಶ್ವರ, ಶ್ರೀ ಮಹಾಗಣಪತಿ ಸಹಿತ ಶ್ರೀ ಮಾತೆ ಕಾವೇರಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಸ್ಥಳೀಯರು ಮತ್ತು ಜಿಲ್ಲೆಯ ಹಲವು ಮಂದಿ ಭಕ್ತಾದಿಗಳ ಅಪೇಕ್ಷೆ ಮೇರೆಗೆ ನಿರ್ಧರಿಸಲಾಗಿದೆ ಎಂದು ಭಾಗಮಂಡಲದ ಕೆ.ಜೆ.ಭರತ್ “ಶಕ್ತಿ” ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ದಿನ ಲೋಕ ಕಲ್ಯಾಣಾರ್ಥದ ಈ ಉದ್ದೇಶಕ್ಕೆ ಕೊಡಗಿನ ಸರ್ವ ಜನಾಂಗದ ಭಕ್ತಾದಿಗಳು ಆಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.