ಕರಿಕೆ, ಸೆ. 9: ಇಲ್ಲಿನ ಚೆತ್ತುಕಾಯ ನ್ಯೂ ಫ್ರೆಂಡ್ಸ್ ಯುವಕ ಸಂಘದ ಆಶ್ರಯದಲ್ಲಿ ಇಪ್ಪತ್ತನೆಯ ವರ್ಷದ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧÀ್ಯಕ್ಷ ಎನ್.ಬಾಲಚಂದ್ರ ನಾಯರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಪುರುಷರ ಹಗ್ಗಜಗ್ಗಾಟ, ಕೇರಂ, ಓಟ, ಮಡಿಕೆ ಒಡೆಯುವ ಸ್ಪರ್ಧೆ, ಓಟ, ಸಂಗೀತ ಸೇರಿದಂತೆ ಹಲವಾರು ಆಟೋಟ ಸ್ಪರ್ಧೆಗಳು ಮಳೆಯ ನಡುವೆಯೂ ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧÀ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಶಿವಪ್ಪ ವಹಿಸಿದ್ದರು. ಮಾಜಿ ಸೈನಿಕರುಗಳಾದ ಕಂಡಿಗೆ ತಿಮ್ಮಯ್ಯ, ಕಂಡಿಗೆ ಪದ್ಮನಾಭ ಹಾಗೂ ಹೊದ್ದೆಟ್ಟಿ ಉದಯಕುಮಾರ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ 2018-19 ನೇ ಸಾಲಿನ ಪರ್ವತಾರೋಹಣದಲ್ಲಿ ಹಿಮಾಚಲ ಪ್ರದೇಶದ ಕುಲ್ಮಾನಾಲಿಯಲ್ಲಿ ಪರ್ವತ ಏರಿ ಮುಂದಿನ ಕ್ಯಾಂಪ್‍ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕೊಡಗಿನ ಇಬ್ಬರಲ್ಲಿ ಕರಿಕೆಯ ಒಬ್ಬರಾದ ಕಾವ್ಯ ಹೆಚ್.ಆರ್. ಹಾಗೂ ಭಾರದ ಗುಂಡು ಹಾಗೂ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಾಹುಲ್ ಮತ್ತು 2018-19ನೇ ಸಾಲಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ವಪ್ನಾ ಇವರುಗಳನ್ನೂ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್ ಪಾಲ್ಗೊಂಡು ಮಾತನಾಡಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್, ಸದಸ್ಯರುಗಳಾದ ಉಷಾಕುಮಾರಿ, ಜಯಂತಿ, ಪುರುಷೋತ್ತಮ, ವಿ.ಎಸ್.ಎಸ್.ಎನ್. ಅಧÀ್ಯಕ್ಷ ಬೇಕಲ್ ಶರಣ್‍ಕುಮಾರ್, ಸದಸ್ಯ ಮಿತ್ರಕುಮಾರ, ಆರಕ್ಷಕ ಸಿಬ್ಬಂದಿಗಳು ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಸದಸ್ಯ ವೆಂಕಪ್ಪಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ಸೌಕತ್ ಆಲಿ, ರಾಜೇಂದ್ರ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.