ಕುಶಾಲನಗರ, ಸೆ. 9: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದ ಎರಡನೇ ತಂಡ ಸೋಮವಾರ ಮೈಸೂರಿಗೆ ತೆರಳಿತು.

ದುಬಾರೆ ಸಾಕಾನೆ ಶಿಬಿರದ ವಿಕ್ರಂ, ಗೋಪಿ, ಕಾವೇರಿ ಆನೆಗಳನ್ನು ಆನೆಕಾಡು ಶಿಬಿರದಿಂದ ಲಾರಿ ಮೂಲಕ ಕಳುಹಿಸಿಕೊಡಲಾಯಿತು.

ಈ ಹಿಂದೆ 3 ಆನೆಗಳನ್ನು ಕಳುಹಿಸಿಕೊಡಲಾಗಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಆನೆಗಳನ್ನು ಬೀಳ್ಕೊಟ್ಟರು.