ಕುಶಾಲನಗರ, ಸೆ. 9: ಕುಶಾಲನಗರ ಪಟ್ಟಣದಲ್ಲಿ ಶುದ್ಧ ಕುಡಿವ ನೀರಿನ ನೂತನ ಘಟಕ ಪ್ರಾರಂಭಿಸಲು ಶಾಸಕರ ನಿಧಿಯಿಂದ ರೂ. 8.5 ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಕುಶಾಲನಗರ ಪಟ್ಟಣದ ಜನವಸತಿ ಪ್ರದೇಶದಲ್ಲಿ ಸ್ಥಳ ನಿಗದಿಗೊಳಿಸಿ ಈ ಘಟಕ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ರಂಜನ್ ಜಿ.ಪಂ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.