ಪೊನ್ನಂಪೇಟೆ, ಸೆ. 9: ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದ ಸಹಯೋಗದಲ್ಲಿ ಆಚರಿಸ ಲಾಗುತ್ತಿರುವ ಗೌರಿ ಗಣೇಶೋತ್ಸವ ಹಾಗೂ ಗೌರಿ ಗಣೇಶ ವಿಸರ್ಜನಾ ಕಾರ್ಯಕ್ರಮ ತಾ. 11 ರಂದು (ನಾಳೆ) ನಡೆಯಲಿದ್ದು, ಪೊನ್ನಂಪೇಟೆ ಕೃಷ್ಣ ನಗರದ ಶ್ರೀಕೃಷ್ಣ ಯುವಕ ಸಂಘ, ಶಿವಕಾಲೋನಿಯ ಶಿವ ಯುವಕ ಸಂಘ, ಕಾಟ್ರಕೊಲ್ಲಿಯ ಗಜಮುಖ ಗೆಳೆಯರ ಬಳಗ, ವಿಘ್ನೇಶ್ವರ ವಾಹನ ಚಾಲಕ ಮಾಲೀಕರ ಸಂಘ, ಮಹಾತ್ಮ ಗಾಂಧಿ ನಗರದ ಯುವಶಕ್ತಿ ಯುವಕ ಸಂಘ, ಹಾಗೂ ಜೋಡುಬೀಟಿ ನೆಹರು ನಗರದ ವಿನಾಯಕ ಯುವಕ ಸಂಘದ ಉತ್ಸವಮೂರ್ತಿಗಳೊಂದಿಗೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿದ್ದು, ಸಂಜೆ 7.30 ಕ್ಕೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.