ಕರಿಕೆ, ಸೆ. 9: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ. ಗ್ರಾಮಕ್ಕೆ ಕೊಡಗು ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಶಿವಕುಮಾರ್ ಹಾಗೂ ಕೀಟ ಶಾಸ್ತ್ರಜ್ಞ ಮಂಜುನಾಥ್ ಅವರು ಭೇಟಿ ನೀಡಿ ಜ್ವರದ ಬಗ್ಗೆ ಸ್ಥಳೀಯ ವೈದ್ಯಾಧಿಕಾರಿ ಹಾಗೂ ಆರೋಗ್ಯ ಸಹಾಯಕರಿಂದ ಮಾಹಿತಿ ಪಡೆದರು.

ಗ್ರಾಮದಲ್ಲಿ ಇಲಿಜ್ವರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಜ್ವರ ಕಾಣಿಸಿಕೊಂಡವರಿಗೆ ಗುಳಿಗೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತರಿಗೆ ಮನೆ ಮನೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿರುವದಾಗಿ ಆರೋಗ್ಯ ಸಹಾಯಕ ಗುರುಪ್ರಸಾದ್ 'ಶಕ್ತಿ' ಗೆ ಮಾಹಿತಿ ನೀಡಿದ್ದಾರೆ.

-ಹೊದ್ದೆಟ್ಟಿ ಸುಧೀರ್