ಮಡಿಕೇರಿ, ಸೆ. 9: ಮನೆಯೊಂದರ ಆವರಣದಲ್ಲಿ ಕಂಡುಬಂದಿದ್ದ ಮರಿ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಸುಂಟಿಕೊಪ್ಪ ಶ್ರೀ ರಾಮ ಬಡಾವಣೆಯಲ್ಲಿ ವಾಸವಿರುವ ಪಂಚಾಯಿತಿ ಸದಸ್ಯ ಕೆ.ಇ. ಕರೀಂ ಅವರ ಮನೆಯ ಕಾಂಪೌಂಡ್ ಒಳಗೆ ಇಂದು ಮಧ್ಯಾಹ್ನ ಮರಿ ನಾಗರಹಾವು ಕಂಡು ಬಂದಿದೆ. ಇದನ್ನು ನೋಡಿದವರು ಬಾಲುರವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಬಾಲು ಅಂದಾಜು 2 ಅಡಿ ಉದ್ದದ ಉರಗವನ್ನು ಸೆರೆಹಿಡಿದು ಸುರಕ್ಷಿತವಾಗಿ ಆನೆಕಾಡು ಅಭಯಾರಣ್ಯಕ್ಕೆ ಬಿಟ್ಟರು.