ಮಡಿಕೇರಿ, ಸೆ. 9: ಪ್ರಸಕ್ತ (2019-20) ಶೈಕ್ಷಣಿಕ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿ ಅರೆ ವೈದ್ಯಕೀಯ ಕೋರ್ಸ್‍ಗಳ ತರಬೇತಿಗೆ ಅರೆ ವೈದ್ಯಕೀಯ ಮಂಡಳಿಯು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ತಾ. 11 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಎಲ್ಲಾ ಕೋರ್ಸ್‍ಗಳಿಗೆ ಪಿಯುಸಿ ವಿಜ್ಞಾನ, ತತ್ಸಮಾನ ಪರೀಕ್ಷೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ತೇರ್ಗಡೆ ಹೊಂದಿರಬೇಕು. ಎಸ್‍ಎಸ್‍ಎಲ್‍ಸಿ/ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿದಾರರು 1 ರಿಂದ 10 ನೇ ತರಗತಿ ಅಥವಾ ಪಿಯುಸಿ ವರೆಗೆ ಕನಿಷ್ಟ 7 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಇದಕ್ಕೆ ಸಂಬಂಧಿಸಿದ ದೃಢೀಕರಣ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು.

ಪಿಯುಸಿ ಅಭ್ಯರ್ಥಿಗಳಿಗೆ 2 ವರ್ಷಗಳು+3 ತಿಂಗಳ ಇಂಟರ್‍ನ್‍ಶಿಪ್ ಮತ್ತು ಎಸ್‍ಎಸ್‍ಎಲ್‍ಸಿ 3 ವರ್ಷಗಳು+3 ತಿಂಗಳ ಇಂಟರ್‍ನ್‍ಶಿಪ್‍ಗಳಿರುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು, ಪ.ಜಾತಿ/ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಬಾರದು. ಅರ್ಜಿ ನಮೂನೆಗಳು ಮಂಡಳಿಯ ಜಾಲತಾಣ hಣಣಠಿ://ತಿತಿತಿ.ಠಿmbಞಚಿಡಿಟಿಚಿಣಚಿಞಚಿ.oಡಿg ನಲ್ಲಿ ಲಭ್ಯವಿರುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.400, ಪ.ಜಾ/ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.250. ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಡೆಬಿಟ್, ಕ್ರೆಡಿಟ್, ನೆಟ್ ಬ್ಯಾಂಕಿಂಗ್ ಮೂಲಕವೇ ಪಾವತಿಸುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಹಾಗೂ ಡೀನ್ ತಿಳಿಸಿದ್ದಾರೆ.