ಮಡಿಕೇರಿ, ಸೆ.8: ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ವೃದ್ಧಾಪ್ಯ ಪಿಂಚಣಿ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ರಾಷ್ಟ್ರದ ಎಲ್ಲಾ 18 ರಿಂದ 40 ವರ್ಷದೊಳಗಿನ ಗರಿಷ್ಠ 2 ಹೆಕ್ಟೇರ್‍ವರೆಗೆ ಭೂ ಹಿಡುವಳಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಘೋಷಣೆ ಮಾಡಿದೆ.

ಈ ಯೋಜನೆಯ ಲಾಭ ಪಡೆಯಲು ರೈತರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಜನ್ಮ ದಿನಾಂಕ ದಾಖಲೆ, ನಾಮ ನಿರ್ದೇಶನ, ಸಣ್ಣ ಮತ್ತು ಅತಿ ಸಣ್ಣ ರೈತರ ದೃಡೀಕೃತ ಪತ್ರ ಹಾಗೂ ಪಹಣಿ ನೀಡಿ ಸರ್ಕಾರಿ ಸ್ವಾಮ್ಯದ ಸಾಮಾನ್ಯ ನಾಗರಿಕ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ವಯಸ್ಸಿನ ಆಧಾರದ ಮೇಲೆ 18 ವರ್ಷ ವಯಸ್ಸಿನ ರೈತರಿಗೆ ಮಾಸಿಕ ರೂ. 55 ಮತ್ತು 40 ವರ್ಷ ವಯಸ್ಸಿನ ರೈತರಿಗೆ ಮಾಸಿಕ ರೂ. 200 ವರೆಗೆ ವಂತಿಕೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಅಥವಾ ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ ವಂತಿಕೆ ಕಟಾವಣೆ ಮಾಡಿಸಬಹುದಾಗಿದೆ. ರೈತರು ಪಾವತಿಸುವ ವಂತಿಕೆ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಸರ್ಕಾರದ ವಂತಿಕೆಯಾಗಿ ಪಾವತಿ ಮಾಡಲಾಗುತ್ತದೆ. ಈ ಯೋಜ&divound; Éಯಡಿಯಲ್ಲಿ ನೋಂದಾಯಿಸಿಕೊಂಡ ಪುರುಷ ಮತ್ತು ಮಹಿಳಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 60 ವರ್ಷ ತುಂಬಿದ ನಂತರ ಮಾಸಿಕ 3 ಸಾವಿರ ರೂ. ಗಳಂತೆ ವೃದ್ಧಾಪ್ಯ ಪಿಂಚಣಿ ನೀಡಲಾಗುತ್ತದೆ.

ನಿವೃತ್ತ, ಹಾಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ ಹಾಗೂ ನೌಕರರು. ಇತರೆ ಯಾವದೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ನೋಂದಾಯಿತ ರೈತರು. ಆದಾಯ ತೆರಿಗೆ ಪಾವತಿದಾರರು. ವೃತ್ತಿಪರರು (ವೈದ್ಯರು, ಅಭಿಯಂತರರು, ವಕೀಲರು ಮತ್ತು ಇತರೆ). ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರು. ಸಾಂಸ್ಥಿಕ ಭೂ ಒಡೆತನ ಹೊಂದಿದವರು ಅರ್ಹರಾಗಿರುವದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ರಾಜು ತಿಳಿಸಿದ್ದಾರೆ.