ಸಿದ್ದಾಪುರ, ಸೆ. 8: ಕಳೆದ ಕೆಲದಿನಗಳಿಂದ ಕಡಿಮೆಯಾಗಿದ್ದ ಕಾಡಾನೆಗಳ ಹಾವಳಿ ಇದೀಗ ಮತ್ತೆ ಪ್ರಾರಂಭವಾಗಿದೆ. ಸಿದ್ದಾಪುರ ಸಮೀಪ ಹುಂಡಿ ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ಒಂಟಿಸಲಗ ಒಂದು ಮುಖ್ಯ ರಸ್ತೆ ಮೂಲಕ ರಾಜಾರೋಷವಾಗಿ ಸುತ್ತಾಡುತ್ತಾ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಮಹಾ ಮಳೆಯಿಂದಾಗಿ ಕಾಡಾನೆಗಳ ಹಿಂಡುಗಳು ನಾಪತ್ತೆಯಾಗಿದ್ದು ಇದೀಗ ಮತ್ತೆ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು ತೋಟಗಳಲ್ಲಿ ದಾಂಧಲೆ ನಡೆಸಿವೆ. ಹಾಡಹಗಲೇ ರಾಜಾರೋಷವಾಗಿ ಸುತ್ತಾಡುತ್ತಿರುವದರಿಂದ ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ; ಅರಣ್ಯ ಇಲಾಖೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಿದರೂ ಹಿಂತಿರುಗಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರಿಗೆ ಹಾಗೂ ಗದ್ದೆ ಕೃಷಿ ಮಾಡಿದ ಕೃಷಿಕರಿಗೆ ಸಮಸ್ಯೆ ಎದುರಾಗಿದೆ. ಸಿದ್ದಾಪುರದ ಗುಯ್ಯ, ಇಂಜಿಲಗೆರೆ, ಕರಡಿಗೋಡು ಘಟ್ಟದದಳ್ಳÀ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿ ಭಯದ ವಾತಾವರಣ ಮೂಡಿದೆ. ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.