ಕರಿಕೆ, ಸೆ. 8: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ಮನೆ ಮೇಲ್ಚಾವಣಿ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಪಚ್ಚೆಪಿಲಾವು ನಿವಾಸಿ ಕರಿಕೆ ವಿ.ಎಸ್.ಎಸ್.ಎನ್. ನಿರ್ದೇಶಕ ಹೊದ್ದೆಟ್ಟಿ ಮಿತ್ರಕುಮಾರ ಅವರ ಮನೆಯ ಮೇಲ್ಚಾವಣಿ ಮುರಿದು ಬಿದ್ದ ಪರಿಣಾಮವಾಗಿ ಮನೆಯ ಗೋಡೆ ಎರಡು ಕಡೆ ಬಿರುಕು ಬಿಟ್ಟಿದ್ದು ಮೇಲ್ಚಾವಣಿಯು ಹಾನಿಗೊಳಗಾಗಿದ್ದು, ಒಂದು ಭಾಗ ಕುಸಿದ ಪರಿಣಾಮ ಸುಮಾರು ಐನೂರು ಹಂಚು ಪುಡಿಯಾಗಿವೆ. ಯಾವದೇ ಅಪಾಯ ಸಂಭವಿಸಿಲ್ಲ.ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

-ಹೊದ್ದೆಟ್ಟಿ ಸುಧೀರ್