ಸುಂಟಿಕೊಪ್ಪ, ಸೆ. 8: ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ಆಂಗ್ಲ ಮಾದ್ಯಮ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ; ಗಮನಾರ್ಹ ಸಾಧನೆಗೈದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆರ್ಹತೆ ಪಡೆದಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್‍ನಲ್ಲಿ ಬಾಲಕರು ಪ್ರಥಮ,ಬಾಲಕಿಯರು ಪ್ರಥಮ, ಹಾಕಿಯಲ್ಲಿ ಬಾಲಕ ಬಾಲಕಿಯರು ಪ್ರಥಮ, ಥ್ರೋಬಾಲ್‍ನಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹೈಜಂಪ್‍ನಲ್ಲಿ ದಾಕ್ಷಾಯಿಣಿ ಪ್ರಥಮ, ಬಾರದ ಗುಂಡು ಎಸೆತದಲ್ಲಿ ಪಕೃತಿ ಪ್ರಥಮ, ಕಾವೇರಮ್ಮ ದ್ವಿತೀಯ ಸ್ಥಾನಗಳಿಸಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ವಾಲಿಬಾಲ್‍ನಲ್ಲಿ ಬಾಲಕಿಯರು ಪ್ರಥಮ ಬಾಲಕರು ದ್ವಿತೀಯ ನೂರು ಮೀಟರ್ ಓಟದಲ್ಲಿ ಅಭಿಉತ್ತಯ್ಯ ಪ್ರಥಮ, ಬಾಲಕಿಯರ 100 ಮೀಟರ್ ಓಟದಲ್ಲಿ ವಿಜಿತ ಪ್ರಥಮ ಹೈಜಂಪ್ ಬಾಲಕರ ವಿಭಾಗದಲ್ಲಿ ಮುಶ್ರಫ್ ಪ್ರಥಮ, ಭಾರದ ಗುಂಡು ಎಸೆತ ಬಾಲಕಿಯರ ವಿಭಾಗದಲ್ಲಿ ಪೊನ್ನಮ್ಮ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂದು ದೈಹಿಕ ಶಿಕ್ಷಣ ಶಿಕ್ಷಕ ಸಲೀಂ ತಿಳಿಸಿದ್ದಾರೆ.