ಮಡಿಕೇರಿ, ಸೆ. 8: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಡಿನೆಲ್ಲೆಡೆ ವಿವಿಧ ಚರ್ಚ್‍ಗಳಲ್ಲಿ ಇಂದು ಏಸುವಿನ ಮಾತೆ ಮರಿಯಮ್ಮ ಅವರ ಜನ್ಮೋತ್ಸವ ಆಚರಣೆ ಯೊಂದಿಗೆ, ಬಲಿಪೂಜೆ, ವಿಶೇಷ ಪ್ರಾರ್ಥನೆಯು ಕ್ರೈಸ್ತ ಬಾಂಧವರಿಂದ ಸಾಮೂಹಿಕವಾಗಿ ನಡೆಯಿತು.ನಗರದ ಸಂತ ಮೈಕಲರ ಚರ್ಚ್‍ನಲ್ಲಿ ಧರ್ಮಗುರುಗಳಾದ ಫಾ. ಅಲ್ಪ್ರೆಡ್ ಜಾನ್ ಮೆಂಡೋಜಾ ನೇತೃತ್ವದಲ್ಲಿ ಈ ಪ್ರಯುಕ್ತ ವಿಶೇಷ ಪ್ರಾರ್ಥನೆ, ಬಲಿಪೂಜೆ ನಡೆಸಲಾಯಿತು. ಪ್ರಾರ್ಥನೆಯ ಬಳಿಕ ಸಂತ ಮೈಕಲರ ಚರ್ಚ್ ಆವರಣದಲ್ಲಿ ಮರಿಯಮ್ಮ ಮಾತೆ ಮೆರವಣಿಗೆ ಏರ್ಪಡಿಸಿ, ನೆರದವರಿಗೆ ಕಬ್ಬು ಹಾಗೂ ತೀರ್ಥ ಪ್ರಸಾದ ಹಂಚಲಾಯಿತು. ಮತ್ತೋರ್ವ ಧರ್ಮಗುರು ಡಾ. ನವೀನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಪರಸ್ಪರ ಶುಭಾಶಯ ಹಂಚಿಕೊಂಡರು.

ಸುಂಟಿಕೊಪ್ಪ: ಯೇಸುಕ್ರಿಸ್ತರ ತಾಯಿ ಕೆಥೋಲಿಕ್ ಕ್ರೈಸ್ತರ ಮಾತೆ ಮರಿಯಮ್ಮ ಜನ್ಮದಿನೋತ್ಸವವನ್ನು; ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಆಚರಿಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು, ಶ್ರದ್ಧಾ ಭಕ್ತಿಯಿಂದ ಸಮಾಜ ಬಾಂಧವರು ಆಚರಿಸಿದರು.

ತಾ. 8 ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿ ಪೆಸ್ತ್) ಆಚರಿಸಿದ್ದು, ಅದಕ್ಕೆ ಪೂರ್ವ ಭಾವಿಯಾಗಿ

(ಮೊದಲ ಪುಟದಿಂದ) ನಡೆಯುವ 9 ದಿನಗಳ ನೊವೇನಾ ಪ್ರಾರ್ಥನೆ ಆಗಸ್ಟ್ 30 ರಿಂದ ಆರಂಭವಾಗಿತ್ತು.

ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವದು. ಚಿಕ್ಕಮಕ್ಕಳು,ಯವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜÉಯಲ್ಲಿ ಪಾಲ್ಗೊಂಡು; ನಂತರ ತಾವು ತಂದ ಹೂವುಗಳನ್ನು ಮರಿಯಮ್ಮ ಅವರಿಗೆ ಸಮರ್ಪಿಸುತ್ತಾರೆ.

9 ದಿನಗಳ ನೊವೇನಾ ಕಾರ್ಯಕ್ರಮಗಳ ಬಳಿಕ 10ನೇ ದಿನ ಇಂದು ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಆನಂತರ ಮನೆ ಮನೆಗಳಲ್ಲಿ ಆಚರಿಸುವದು ಸಂಪ್ರದಾಯವಾಗಿದೆ.

ಮೊಂತಿ ಪೆಸ್ತ್ ಅಂಗವಾಗಿ ಭಾನುವಾರ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ. ಎಡ್ವರ್ಡ್ ವಿಲಿಯಂ ಸಾಲ್ಡಾನ ಅವರು, ಅಡಂಬರ ದಿವ್ಯ ಬಲಿಪೂಜೆ ಪ್ರವಚನಗಳನ್ನು ನೀಡಿದರು. ಮೊಂತಿಪೆಸ್ತ್ ಅಂಗವಾಗಿ ನೂತನ ಕಬ್ಬು ತೆನೆಗಳನ್ನು ವಿತರಿಸಿದರು. ಕ್ರೈಸ್ತ ಬಾಂಧವರು ಮನೆ ಮನೆಗಳಿಂದ ಒಗ್ಗೂಡಿಸಿ ತಂದಿದ ಬಗೆ ಬಗೆಯ ಪುಷ್ಪಗಳನ್ನು ಸಮರ್ಪಿಸುವ ಮೂಲಕ ಹಬ್ಬದ ಸಂಡಗರಕ್ಕೆ ಮುನ್ನುಡಿ ಇಟ್ಟರು.