ಭಾಗಮಂಡಲ, ಸೆ. 7: ಪವಿತ್ರ ಕಾವೇರಿಯ ಉದ್ಭವ ಕ್ಷೇತ್ರವಾದ ತಲಕಾವೇರಿಯ ಪುರಾತನ ಬ್ರಹ್ಮಗಿರಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳು ಇದೀಗ ಅಧಿಕಗೊಳ್ಳುತ್ತ ಬರುತ್ತಿವೆÉ. ಇದರಿಂದಾಗಿ ಸ್ಥಳೀಯರಲ್ಲಿ ತೀವ್ರ ಕಳವಳವುಂಟಾಗಿದೆ.ಇದೀಗ ಅರಣ್ಯ ವಲಯದಿಂದಲೇ ದೊರೆತ ಮಾಹಿತಿಯನ್ವಯ 2016-17 ರಲ್ಲಿ ಬೆಟ್ಟದಲ್ಲಿ ಜಲ ಸಂರಕ್ಷಣೆಗೆಂದು ಅಗೆಯಲಾಗಿದ್ದ ಇಂಗು ಗುಂಡಿಗಳಲ್ಲಿಯೇ ತೀವ್ರ ರೀತಿಯಲ್ಲಿ ಬಿರುಕು ಮೂಡಿದೆ. ಕಳೆದ ವರ್ಷದಿಂದ ಮಳೆ- ಭೂಕುಸಿತ ಹೆಚ್ಚಾಗುತಿದ್ದು ಈ ವರ್ಷವೂ ಮುಂದುವರಿದಿರುವದರಿಂದ ಬೆಟ್ಟದಲ್ಲಿನ ಬಿರುಕು ವಿಸ್ತøತಗೊಳ್ಳುತ್ತಿದೆ. (ಮೊದಲ ಪುಟದಿಂದ) ಈ ಬಗ್ಗೆ ಮಾಹಿತಿ ದೊರೆತೊಡನೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಾತ್ಕಾಲಿಕ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಭೂ ವಿಜ್ಞಾನಿಗಳು ನೀಡಿರುವ ವರದಿಯೊಂದರಲ್ಲಿ ತಾತ್ಕಾಲಿಕ ಕ್ರಮಕ್ಕೆ ಸಲಹೆಯಿತ್ತಿದ್ದಾರೆ. ಈ ಸಲಹೆಯನ್ವಯ ಮರಳು ಚೀಲಗಳು ಹಾಗೂ ಅಗತ್ಯವಿರುವೆಡೆ ಸಿಮೆಂಟ್ ಬಳಸಿ ಬಿರುಕನ್ನು ಮುಚ್ಚುವಂತೆ ಅರಣ್ಯ ಉಪ ಸಂರಕ್ಷಣಾಧಿಕಾರಿಯವರಿಗೆ ಜಿಲ್ಲಾಧಿಕಾರಿ ನಿರ್ದೇಶನವಿತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿಯೂ ಮಾಹಿತಿಯಿತ್ತಿದ್ದಾರೆ. ಬಿರುಕು ಹೆಚ್ಚಾಗಿರುವೆಡೆ ಅಪಾಯದ ಸ್ಥಳದ ಕೆಳಭಾಗದಲ್ಲಿರುವ ಅಂಗಡಿ ಮಳಿಗೆಗಳನ್ನು ಸದ್ಯಕ್ಕೆ ತೆರವುಗೊಳಿಸಲಿರುವದಾಗಿ ಹಾಗೂ ಅಗತ್ಯ ಬಿದ್ದರೆ ಮುಂಜಾಗರುಕತಾ ಕ್ರಮವಾಗಿ ಮನೆಗಳನ್ನೂ ತೆರವುಗೊಳಿಸುವದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಭಾಗಮಂಡಲ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್ ಅವರನ್ನು ಸಂಪರ್ಕಿಸಿದಾಗ ಬಹ್ಮಗಿರಿಯಲ್ಲಿ ಬಿರುಕು ಹೆಚ್ಚಾಗುತ್ತಿರುವ ಬಗ್ಗೆ “ಶಕ್ತಿ” ಯೊಂದಿಗೆ ಖಾತರಿಪಡಿಸಿದ್ದಾರೆ.ಈ ಕುರಿತು ತಾನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವದಾಗಿ ತಿಳಿಸಿದ್ದಾರೆ.
ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಈ ಬಗ್ಗೆ ಚರ್ಚಿಸಿ ಮುಂದೆ ನಡೆಸಬೇಕಾದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವದಾಗಿ “ಶಕ್ತಿ”ಗೆ ಮಾಹಿತಿಯಿತ್ತಿದ್ದಾರೆ. ಭಾಗಮಂಡಲ ನಾಗರಿಕ ಸಮಿತಿ ಪ್ರಮುಖ ಕೆ.ಜೆ. ಭರತ್ ಅವರ ಅನಿಸಿಕೆಯಮತೆ ಬ್ರಹ್ಮಗಿರಿಯಲ್ಲಿ ಕಾಣಿಸಿಕೊಂಡ ಈ ಭಾರೀ ಬಿರುಕು ಸ್ಥಳೀಯರಲ್ಲಿ ಆತಂಕಕ್ಕೆ ಎಡೆ ಮಾಡಿದೆ. ಇದನ್ನು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುವಂತೆ ಅವರು “ಶಕ್ತಿ” ಮೂಲಕ ವಿನಂತಿಸಿದ್ದಾರೆ.
ಪತ್ರಿಕೆಗೆ ಲಭ್ಯವಾದ ವರದಿಯಂತೆ ಕೆಲವಡೆ ಹೆಚ್ಚಾಗುತ್ತಿರುವ ಬಿರುಕು ಒಂದು ಅಡಿಯನ್ನೂ ಮೀರುತ್ತಿದೆ. ಈ ಬಗ್ಗೆ ತಕ್ಷಣದ ಕ್ರಮ ಅಗತ್ಯ ಎಂದು ಸ್ಥಳೀಯ ನಾಗರಿಕÀರು ಮನವಿ ಮಾಡಿದ್ದಾರೆ. ಬ್ರಹ್ಮಗಿರಿಯಲ್ಲಿ ಮೂಡಿರುವ ಬಿರುಕಿನ ಸಂಬಂಧದ ವೀಡಿಯೋ ತುಣುಕೊಂದು ಇಂದು ಸಾಮಾಜಿಕ ಜಾಲ ತಾಣಗಳಲ್ಲಿ “ವೈರಲ್” ಆಗಿದ್ದು ಜನರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ ಎಂದು ನಾಪೋಕ್ಲುವಿನ ದುಗ್ಗಳ ಸದಾನಂದ ಅವರು ಮಾಹಿತಿಯಿತ್ತಿದ್ದಾರೆ. ಬ್ರಹ್ಮಗಿರಿಯಲ್ಲಿ ಮೂಡಿದ ಬಿರುಕಿನ ಬಗ್ಗೆ ಇತ್ತೀಚೆಗೆ “ಶಕ್ತಿ”ಯಲ್ಲಿ ವಿವರ ವರದಿ ಪ್ರಕಟಗೊಂಡಿದ್ದು ಆ ಬಳಿಕ ಜಿಲ್ಲಾಡಳಿತವೂ ಈ ಬಗ್ಗೆ ಜಾಗೃತಿಗೊಂಡಿದೆ.
ಚಿತ್ರ ವರದಿ: ಸುನಿಲ್ ಕುಯ್ಯಮುಡಿ