ಮಡಿಕೇರಿ, ಸೆ. 7: ಭಾರತ-ಪಾಕ್ ನಡುವೆ ಐದೂವರೆ ದಶಕಗಳ ಹಿಂದೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನ ಗೈದ ಕೊಡಗಿನ ವೀರ ಯೋಧ ಸ್ಕ್ವಾಡ್ರÀನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 54ನೇ ಪುಣ್ಯಸ್ಮರಣಾ ಕಾರ್ಯಕ್ರಮ, ನಗರದ ಖಾಸಗಿ ಬಸ್ ನಿಲ್ದಾಣದ ದೇವಯ್ಯ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣ ವಾಗಿ ನಡೆಯಿತು. ಕೊಡವ ಮಕ್ಕಡ ಕೂಟ ಮತ್ತು ಅಜ್ಜಮಾಡ ದೇವಯ್ಯ ಕುಟುಂಬಸ್ಥರ ಸಹಯೋಗದಲ್ಲಿ ದೇವಯ್ಯ ವೃತ್ತದಲ್ಲಿ ನಡೆದÀ ಕಾರ್ಯಕ್ರಮದಲ್ಲಿ ಯೋಧನ ಭಾವಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು, ಮಾಜಿ ಸೈನ್ಯಾಧಿಕಾರಿಗಳು, ಮಾಜಿ ಯೋಧರು, ಜನಪ್ರತಿನಿಧಿಗಳು ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿದರು.ಈ ಸಂದರ್ಭ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಮಾತನಾಡಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ತಮ್ಮ ಸಾಹಸ ಕಾರ್ಯಾಚರಣೆಯ ಮೂಲಕ ದೇಶ ರಕ್ಷಣೆÉಗಾಗಿ ಬಲಿದಾನಗೈದ ಮಹಾನ್ ವ್ಯಕ್ತಿಯಾಗಿದ್ದು, ಕೊಡಗಿನ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಮಂದಿ ಹೊರ ಪ್ರದೇಶಗಳಿಗೆ

(ಮೊದಲ ಪುಟದಿಂದ) ತೆರಳುವ ಸಂದರ್ಭ ಅವರನ್ನು ಕೊಡಗಿನ ವರೆಂದು ಗುರುತಿಸುವದೇ ಹೆಮ್ಮೆಯ ವಿಷಯ. ಈ ಗೌರವವನ್ನು ನಮ್ಮ ಹಿರಿಯರು ಸೈನ್ಯ ಮತ್ತು ಇತರೆ ಕ್ಷೇತ್ರಗಳಲ್ಲಿನ ಸಾಧನೆಯಿಂದ ಸಂಪಾದಿಸಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಸಾಹಸ, ದೇಶ ಪ್ರೇಮ ಯುವ ಪೀಳಿಗೆಗೆ ಆದರ್ಶಪ್ರಾಯ ವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗು ವೀರ ಯೋಧರ ನಾಡು, ಕೊಡಗಿನ ಅನೇಕರು ಸೇನೆಗೆ ಸೇರಿ ದೇಶಕ್ಕಾಗಿ ಹಾಗೂ ನಾಡಿನ ಜನತೆಯ ರಕ್ಷಣೆಗಾಗಿ ಬಲಿದಾನಗೈದಿದ್ದು, ಇದು ಯುವ ಪೀಳಿಗೆಗೆ ಮಾದರಿಯಾಗಬೇಕು ಮತ್ತು ಕೊಡಗಿನ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವಂತಾಗಬೇಕು ಎಂದÀು ಕರೆನೀಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೆÀÇೀರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮಾತನಾಡಿ, 1965ರಲ್ಲಿ ಇಂಡೋ ಪಾಕ್ ಸಮರದಲ್ಲಿ ಸ್ಕ್ವಾಡ್ರನ್ ಲೀಡರ್ ದೇವಯ್ಯ ಶತ್ರು ರಾಷ್ಟ್ರದ ಆಧುನಿಕ ಎಫ್16 ಯುದ್ಧ ವಿಮಾನವನ್ನು ತಮ್ಮ ಸಾಧಾರಣ ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿ, ತಾವೂ ವೀರಮರಣವನ್ನಪ್ಪುವ ಮೂಲಕ ಚರಿತ್ರೆಯನ್ನೇ ನಿರ್ಮಿಸಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮರಣಾನಂತರ ಮಹಾವೀರ ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿತೆಂದು ನೆನಪಿಸಿದರು.

ಇಂತಹ ವೀರಸೇನಾನಿಯ ಪ್ರತಿಮೆಯನ್ನು ಸ್ಥಾಪಿಸಬೇಕಿರುವ ಈ ಹಳೇ ಬಸ್ ನಿಲ್ದಾಣವನ್ನು ಮಡಿಕೇರಿ ಸ್ಕ್ವೇರ್ ಆಗಿ ಪರಿವರ್ತಿಸುವ ಪ್ರಯತ್ನ ಸರಿಯಲ್ಲ. ಇದನ್ನು ಸ್ಕ್ವಾಡ್ರನ್ ಲೀಡರ್ ದೇವಯ್ಯ ಸ್ಕ್ವೇರ್ ಆಗಿ ಅಸ್ತಿತ್ವಕ್ಕೆ ತರುವದು ಹೆಚ್ಚು ಸೂಕ್ತವೆಂದು ತಿಳಿಸಿ, ಮಹಾನ್ ಯೋಧನ ಬಗ್ಗೆ ಜಿಲ್ಲೆಯ ಜನತೆ ಅರಿತು ಗೌರವಿಸುವಂತಾಗ ಬೇಕೆಂದು ಆಶಿಸಿದರು.

ಫೋರಂ ಸಂಚಾಲಕ ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಮಾತನಾಡಿ, ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ಹಳೆಯ ವಿಮಾನದ ಮೂಲಕ ಕೆಡಹುವ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮಹಾಭಾರತದ ಅಭಿಮನ್ಯುವಿನಂತೆ ಯಶೋಗಾಥೆ ಮೆರೆದಿದ್ದು, ಎಲ್ಲ ಕಾಲಕ್ಕೂ ಭಾರತೀಯರಿಗೆ ಹೆಮ್ಮೆಯೊಂದಿಗೆ ಸ್ಫೂರ್ತಿ ನೀಡಲಿದೆ ಎಂದು ಬಣ್ಣಿಸಿದರು.

ಆತ್ಮಕತೆ: ಆತ ಅಲ್ಲದೆ ದೇವಯ್ಯ ಅವರ ಸಾಹಸವನ್ನು ಶತ್ರು ರಾಷ್ಟ್ರದ ಯೋಧ ಅಹ್ಮದ್ ಹುಸೇನ್ ತನ್ನ ‘ವಿಂಗ್ಸ್ ಆಫ್ ಫಯರ್’ ಎಂದು ಉದ್ಘರಿಸಿದ್ದರೆಂದು ಸ್ಮರಿಸಿಕೊಂಡರು.

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮಾರಕ ಟ್ರಸ್ಟ್‍ನ ಪ್ರಮುಖರಾದ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಈಗಾಗಲೆ ಮಹಾನ್ ಯೋಧನ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ಮಳೆಗಾಲದ ಬಳಿಕ ಅದನ್ನು ಈ ವೃತ್ತದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆಗಳನ್ನು ನಡೆಸಲಾಗಿದೆ ಯೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಮಳೆ ಕಡಿಮೆಯಾದÀ ತಕ್ಷಣ ಸ್ವ್ಕಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಿ, ಇದೇ ಡಿ. 24 ರಂದು ಲೋಕಾರ್ಪಣೆ ಮಾಡಲಾಗುವದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎ.ಪಿ. ಕುಶಾಲಪ್ಪ, ಎ.ಎಸ್. ನಂಜಪ್ಪ, ಎ.ಎನ್. ಬೆಳ್ಯಪ್ಪ, ಎ.ಎಂ. ರಮೇಶ್ ಪೊಲೀಸ್ ಅಧಿಕಾರಿ ಐ.ಪಿ. ಮೇದಪ್ಪ, ಡಾ. ಸಣ್ಣುವಂಡ ಕಾವೇರಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಪುತ್ತರಿರ ಕರುಣ್ ಕಾಳಯ್ಯ ಹಾಗೂ ಅಜ್ಜಮಾಡ ಕುಟುಂಬಸ್ಥರು ಹಾಜರಿದ್ದರು.