ಗೋಣಿಕೊಪ್ಪಲು: ಗಣೇಶ ಚತುರ್ಥಿ ಪ್ರಯುಕ್ತ ರಾಜ್ಯ ಆಧಿಜಾಂಬವ ಯುವಸೇನೆಯ ವತಿಯಿಂದ ನೆರೆ ಸಂತ್ರಸ್ತರಿಗೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದರು.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಗೋಣಿಕೊಪ್ಪಲು ಎರಡನೇ ವಿಭಾಗದ ಕೀರೆ ಹೊಳೆ ಬದಿಯ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಇಂತಹ ಕುಟುಂಬಗಳನ್ನು ಗುರುತಿಸಿ ರಾಜ್ಯ ಆಧಿ ಜಾಂಬವ ಯುವ ಸೇನೆಯ ಅಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ಸಂತ್ರಸ್ತರಿಗೆ ವಿವಿಧ ವಸ್ತುಗಳನ್ನು ನೀಡಿದರು.
ನೆರಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಚಕ್ರವರ್ತಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿ ಪರಿಹಾರಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಗ್ರಾ.ಪಂ. ಸದಸ್ಯರುಗಳಾದ ಸುರೇಶ್ ರೈ, ಮಂಜುಳ, ಮುರುಗ, ಆಧಿಜಾಂಬವ ಯುವ ಸೇನೆಯ ಜಿಲ್ಲಾಧ್ಯಕ್ಷ ಸತೀಶ್ ಸಿಂಗಿ ಸೇರಿದಂತೆ ಜಿಲ್ಲಾ ಗೌರವಾಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಪದಾಧಿಕಾರಿಗಳಾದ ರವಿ, ಶ್ರೀನಿವಾಸ, ಹರೀಶ್, ಬಿಬೀಶ್, ಷಣ್ಮುಗಂ, ಗಣೇಶ್, ಸರವಣ, ದೀಪು ಹಾಜರಿದ್ದರು.ಗುಡ್ಡೆಹೊಸೂರು: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ನಂಜರಾಯಪಟ್ಟಣ, ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 90 ಮಂದಿ ನಿರಾಶ್ರಿತರಿಗೆ ಶಾಸಕ ಅಪ್ಪಚ್ಚು ರಂಜನ್ ತಲಾ ರೂ. 25 ಸಾವಿರಗಳ ಚೆಕ್‍ನ್ನು ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿ.ಡಿ.ಓ. ಶ್ಯಾಂ ಹಾಜರಿದ್ದರು.ನಾಪೆÇೀಕ್ಲು: ಮಹಾಮಳೆಯಿಂದ ಮನೆ ಕಳೆದುಕೊಂಡ ನಾಪೆÇೀಕ್ಲು ಬೊಳಿಬಾಣೆಯ ಕೆ.ಎಸ್.ರಮೇಶ್ ಅವರಿಗೆ ನಾಪೆÇೀಕ್ಲು ಲಯನ್ಸ್ ಕ್ಲಬ್ ವತಿಯಿಂದ ರೂ. 10 ಸಾವಿರ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಚೌರೀರ ಉದಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್ ನಿದೆರ್Éೀಶಕರಾದ ಕನ್ನಂಬಿರ ಸುಧಿ ತಿಮ್ಮಯ್ಯ, ಕೇಲೇಟಿರ ದೀಪು, ಅಪ್ಪಾರಂಡ ತಿಮ್ಮಯ್ಯ, ಶಿವಚಾಳಿಯಂಡ ಕಾಳಪ್ಪ, ಕೇಟೋಳಿರ ರತ್ನಾ ಚರ್ಮಣ್ಣ ಮತ್ತಿತರರು ಇದ್ದರು.ಗೋಣಿಕೊಪ್ಪಲು: ಇತ್ತೀಚೆಗೆ ಸುರಿದ ಮಳೆಯಿಂದ ತೊಂದರೆಗೆ ಸಿಲುಕಿದ್ದ ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾ ಕಾಲೋನಿಯ 30 ಕುಟುಂಬಗಳಿಗೆ ಪೊನ್ನಂಪೇಟೆಯ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಪರಿಹಾರ ಚೆಕ್ ವಿತರಿಸಿದರು. ಮಳೆಯಿಂದ 30 ಗುಡಿಸಲುಗಳು ನೀರು ತುಂಬಿ ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಒಂದು ಕುಟುಂಬಕ್ಕೆ ತಲಾ ರೂ. 4,100 ರಂತೆ ಪರಿಹಾರ ಧನ ವಿತರಿಸಲಾಯಿತು.
ಪೊನ್ನಂಪೇಟೆ ಕಂದಾಯ ಅಧಿಕಾರಿ ರಾಧÀಕೃಷ್ಣ, ಗ್ರಾಮ ಲೆಕ್ಕಿಗರಾದ ಮಂಜುನಾಥ್, ಯಶ್‍ವಂತ್, ಈ ಸಂದರ್ಭ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ವಿನು ಚಂಗಪ್ಪ, ಪೊನ್ನಂಪೇಟೆ ಎಪಿಎಂಸಿ ಅಧ್ಯಕ್ಷ ಮಂಜು, ಬಿಜೆಪಿ ಮುಖಂಡರಾದ ಪಂದ್ಯಂಡ ಹರೀಶ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಅಮ್ಮತ್ತೀರ ಸುರೇಶ್,ಶಾಸಕರ ಆಪ್ತ ಸಹಾಯಕ ಮಲ್ಲಂಡ ಮಧು ಮುಂತಾದವರು ಹಾಜರಿದ್ದರು.ವೀರಾಜಪೇಟೆ: ಪ್ರಕೃತಿ ವಿಕೋಪಕ್ಕೆ ತುತ್ತಾದ ಸಿದ್ದಾಪುರ, ವೀರಾಜಪೇಟೆ ಪ್ರದೇಶದ ಜನರಿಗೆ ಮೈಸೂರು ಧರ್ಮಕ್ಷೆತ್ರದ ಓ.ಡಿ.ಪಿ. ಸಂಸ್ಥೆಯಿಂದ 354 ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕರಡಿಗೋಡು, ನೆಲ್ಲಿಹುದಿಕೇರಿ, ಕುಂಬಾರಗುಂಡಿ, ಬೆಟ್ಟದÀಕಾಡು, ಕಕ್ಕಟುಕಾಡು, ಗುಹ್ಯ, ಕೂಡುಗದ್ದೆ ಗ್ರಾಮಗಳಿಗೆ ಭೇಟಿ ನೀಡಿ ನೆರೆಯಿಂದ ಹಾನಿಗೊಳಗಾದ ಮನೆಗಳ ಜನರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮದಲೈಮುತ್ತು, ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಓಡಿಪಿ ಸಂಸ್ಥೆಯ ನಿರ್ದೇಶಕ ಜೋವಾನ್ಸ್, ರೋಷನ್ ಬಾಬು, ಸಹಾಯಕ ಗುರುಗಳು ಮತ್ತು ಓಡಿಪಿ ಸಿಬ್ಬಂದಿ ಹಾಜರಿದ್ದರು.